ಮುಂಬೈ:ಬಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಹೆಸರಾಗಿರುವಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಪ್ತಪದಿ ತುಳಿಯಲು ನಿಶ್ಚಿಯಿಸಿದ್ದು ಬರುವ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ.
ಹೌದು, ಈ ವಿಷಯವನ್ನು ಆಲಿಯಾ ಭಟ್ ಅವರೇ ಖಚಿತಪಡಿಸಿದ್ದಾರೆ. ಖಾಸಗಿ ನಿಯತಕಾಲಿಕೆಗೆ ನೀಡಿರುವ ಹೇಳಿಕೆಯಲ್ಲಿ, ಬರುವ ಡಿಸೆಂಬರ್ ತಿಂಗಳಲ್ಲಿ ವಿವಾಹವಾಗಲಿದ್ದು ಈಗಾಗಲೇ ಸಿದ್ಧತೆ ಕೆಲಸಗಳು ನಡೆಯುತ್ತಿವೆ ಎಂದುಆಲಿಯಾ ಹೇಳಿದ್ದಾರೆ.
ಕಪೂರ್ ಕುಟುಂಬದ ರಣಬೀರ್ ಕಪೂರ್ ಹಾಗೂ ಮಹೇಶ್ ಭಟ್ ಮಗಳು ಆಲಿಯಾ ಭಟ್ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.ಕಳೆದೊಂದು ವರ್ಷದಿಂದ ಈ ಜೋಡಿ ವಿವಾಹವಾಗುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದವು. ಇದೀಗ ಮದುವೆಯಾಗುವ ತಿಂಗಳು ನಿಗದಿಯಾಗಿದ್ದು ದಿನಾಂಕದ ಬಗ್ಗೆ ಆಲಿಯಾ ಭಟ್ ಏನೂ ಹೇಳಿಲ್ಲ.ಈಗಾಗಲೇ ಎರಡು ಕುಟುಂಬಗಳ ಹಿರಿಯರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಆಲಿಯಾ ಮತ್ತು ರಣಬೀರ್ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನದ ಸಿನಿಮಾ ಇದು. ಈ ಚಿತ್ರ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಆಲಿಯಾ ಭಟ್ ಸಂಜಯ್ ಲೀಲಾ ಬನ್ಸಾಲಿ ಹಾಗೂ ಕರುಣ್ ಜೋಹರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಈ ಎರಡು ಚಿತ್ರಗಳ ಚಿತ್ರೀಕರಣ ಅಕ್ಟೋಬರ್ ತಿಂಗಳಲ್ಲಿ ಮುಗಿಯಲಿದೆ. ಬಳಿಕ ವಿವಾಹವಾಗುವ ಯೋಜನೆ ಆಲಿಯಾ ಅವರದ್ದು ಎನ್ನಲಾಗಿದೆ.
ಈಗಾಗಲೇ ಆಲಿಯಾ ಭಟ್, ಕಪೂರ್ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.