ಸದ್ಯ ಬಾಲಿವುಡ್‌ನಲ್ಲಿ ಪ್ರೇಮಪಕ್ಷಿಗಳೆಂದು ಗುರುತಿಸಿಕೊಳ್ಳುತ್ತಿರುವ ಆಲಿಯಾ ಭಟ್, ರಣಬೀರ್ ಕಪೂರ್ ಜೊತೆಯಾಗಿ ನಟಿಸುತ್ತಿರುವ ಮೊದಲ ಚಿತ್ರ ಬ್ರಹ್ಮಾಸ್ತ್ರ. ಈ ಚಿತ್ರಬಿಡುಗಡೆಯಾಗಿ, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದ ನಂತರ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ನಟಿಸುವುದಾಗಿ ಈ ಜೋಡಿ ನಿರ್ಧರಿಸಿದ್ದರಂತೆ.
ರಣಬೀರ್ ಕಪೂರ್– ಆಲಿಯಾ ಭಟ್ ಬಗ್ಗೆ ಆಗಾಗ ಗಾಳಿಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಈ ಜೋಡಿ ಎಲ್ಲಿಯೂ ಮಾತನಾಡಿಲ್ಲ.ಆದರೆ ಈ ಜೋಡಿಯನ್ನು ಸಿನಿಮಾದಲ್ಲೂ ಪ್ರೇಕ್ಷಕರು ಇಷ್ಟಪಡುತ್ತಾರಾ ಎಂಬುದಕ್ಕೆ ಬ್ರಹ್ಮಾಸ್ತ್ರ ಬಿಡುಗಡೆಯಾಗುವ ತನಕ ಕಾಯಬೇಕು. ಈಗಾಗಲೇ ಈ ಜೋಡಿಗೆ ಒಟ್ಟಿಗೆ ನಟಿಸಲು ಅನೇಕ ಸಿನಿಮಾದ ಅವಕಾಶಗಳು ಬಂದಿವೆ. ಆದರೆ ಎಲ್ಲವನ್ನೂ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ನಿಜ ಜೀವನದಲ್ಲಿ ಜೋಡಿಗಳಾಗಿ ಗುರುತಿಸಿಕೊಂಡವರ ಸಿನಿಮಾಗಳು ಬಿಡುಗಡೆಯಾದಾಗ, ಅವರನ್ನು ಸಿನಿಮಾದಲ್ಲಿ ಪ್ರೇಕ್ಷಕರು ಒಪ್ಪಿಕೊಳ್ಳದೇ ಇರುವ ಅನೇಕ ನಿದರ್ಶನಗಳು ಬಾಲಿವುಡ್‌ನಲ್ಲಿವೆ. ಸೈಫ್ ಅಲಿಖಾನ್– ಕರೀನಾ ಕಪೂರ್ ಇದಕ್ಕೊಂದು ಉದಾಹರಣೆ.
ಹಾಗಾಗಿ ‘ಬ್ರಹ್ಮಾಸ್ತ್ರ’ ಬಿಡುಗಡೆಯಾಗುವ ತನಕ ಈ ಜೋಡಿ ಕಾಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಕೂಡ ನಟಿಸಿದ್ದು, ಇದೇ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.