ADVERTISEMENT

3 ದಿನಗಳಲ್ಲಿ ₹356 ಕೋಟಿ ಗಳಿಸಿದ ರಣಬೀರ್, ರಶ್ಮಿಕಾ ಅಭಿನಯದ ‘ಅನಿಮಲ್’

ಪಿಟಿಐ
Published 4 ಡಿಸೆಂಬರ್ 2023, 7:57 IST
Last Updated 4 ಡಿಸೆಂಬರ್ 2023, 7:57 IST
‘ಅನಿಮಲ್’ ಚಿತ್ರದ ಪೋಸ್ಟರ್
‘ಅನಿಮಲ್’ ಚಿತ್ರದ ಪೋಸ್ಟರ್   

ಮುಂಬೈ: ರಣಬೀರ್ ಕಪೂರ್ ಅಭಿನಯದ ‘ಅನಿಮಲ್‘ ಚಿತ್ರ 3 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹356 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ.

ಸಂದೀಪ್ ರೆಡ್ಡಿ ವಂಗ ನಿರ್ದೆಶನದ ಚಿತ್ರವು ಇದೇ ಶುಕ್ರವಾರ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಂಡಿತ್ತು.

ನಿರ್ಮಾಣ ಸಂಸ್ಥೆ ಟಿ–ಸೀರೀಸ್ ಎಕ್ಸ್‌ ಖಾತೆಯಲ್ಲಿ ವಾರಾಂತ್ಯದ ಗಳಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ADVERTISEMENT

‘ವಿಶ್ವದಾದ್ಯಂತ ವೀಕೆಂಡ್ ಸುನಾಮಿ ಕಲೆಕ್ಷನ್‌ನಲ್ಲಿ ₹356 ಕೋಟಿ ಗಳಿಕೆ ಕಂಡಿದೆ’ಎಂದು ಟ್ವೀಟ್ ಮಾಡಲಾಗಿದೆ.

ಅನಿಲ್ ಕಪೂರ್, ಬಾಬಿ ದೇವೊಲ್, ರಶ್ಮಿಕಾ ಮಂದಣ್ಣ, ತೃಪ್ತಿ ಡಿಮ್ರಿ, ಸುರೇಶ್ ಒಬೆರಾಯ್ ಮತ್ತು ಪ್ರೇಮ್ ಚೋಪ್ರಾ ತಾರಾಗಣದಲ್ಲಿದ್ದಾರೆ.

ಭೂಷಣ್ ಕುಮಾರ್ ಮತ್ತು ಕೃಷ್ಣನ್ ಕುಮಾರ್ ಒಡೆತನದ ಟಿ ಸೀರೀಸ್, ಮುರಾದ್ ಖೇತಾನಿಯವರ ಸಿನೆಲ್ ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗ ಅವರ ಭದ್ರಕಾಳಿ ಪಿಕ್ಚರ್ ಬ್ಯಾನರ್ ಅಡಿ ಚಿತ್ರ ನಿರ್ಮಾಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.