ಮುಂಬೈ: ರಂಗ ಕಲಾವಿದ ಹಾಗೂ ಬಾಲಿವುಡ್, ಮರಾಠಿ ಸಿನಿಮಾ ನಟ ರಂಜಿತ್ ಚೌಧರಿ ಬುಧವಾರ ತಡ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ರಂಜಿತ್ ಚೌಧರಿ ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಂಜಿತ್ ಚೌಧರಿ ನಿಧನದ ಸುದ್ದಿಯನ್ನು ಅವರ ಸಹೋದರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ರಂಜಿತ್ ನಟಿಸಿದ್ದ ಕಾಮಸೂತ್ರ, ಖಠಾ ಮೀಠಾ, ಖೂಬುಸೂರತ್ ಸಿನಿಮಾಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು. ರಂಜಿತ್ ದಿವಂಗತ ನಟಿ ಪರ್ಲ್ ಪದಂಸೀ ಅವರ ಪುತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.