ADVERTISEMENT

ಆಸ್ಕರ್‌ ಕಣದಿಂದ 'ಗಲ್ಲಿ ಬಾಯ್‌' ಔಟ್‌: ಭಾರತೀಯರಿಗೆ ಈ ವರ್ಷವೂ ನಿರಾಸೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 7:56 IST
Last Updated 17 ಡಿಸೆಂಬರ್ 2019, 7:56 IST
ಗಲ್ಲಿ ಬಾಯ್‌ ಚಿತ್ರದಲ್ಲಿ ರಣವೀರ್ ಸಿಂಗ್‌ ಮತ್ತು ಅಲಿಯಾ ಭಟ್‌
ಗಲ್ಲಿ ಬಾಯ್‌ ಚಿತ್ರದಲ್ಲಿ ರಣವೀರ್ ಸಿಂಗ್‌ ಮತ್ತು ಅಲಿಯಾ ಭಟ್‌   

ನವದೆಹಲಿ:92ನೇ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಭಾರತೀಯ ಸಿನಿಮಾ‘ಗಲ್ಲಿ ಬಾಯ್‌’ ಸ್ಪರ್ಧಾ ಕಣದಿಂದ ಹೊರಬಿದ್ದಿದೆ.

ಆಸ್ಕರ್‌ ಅಕಾಡೆಮಿಯು ಅಂತರರಾಷ್ಟ್ರೀಯ ಸಿನಿಮಾ ವಿಭಾಗದಅಂತಿಮ ಸುತ್ತಿನ ಟಾಪ್‌ 10 ಚಿತ್ರಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.

ಟಾಪ್‌ ಹತ್ತು ಚಿತ್ರಗಳ ಪಟ್ಟಿ ಸೇರುವಲ್ಲಿಗಲ್ಲಿ ಬಾಯ್‌ ವಿಫಲವಾಗಿದೆ. ಈ ಬಾರಿ ಗಲ್ಲಿ ಬಾಯ್‌ ಸಿನಿಮಾ ಆಸ್ಕರ್‌ ಪ್ರಶಸ್ತಿ ಪಡೆಯಲಿದೆ ಎಂದು ನಿರೀಕ್ಷಿಸಿದ್ದಅಭಿಮಾನಿಗಳಿಗೆ ನಿರಾಸೆಯಾಗಿದೆ. ಹಂಗೇರಿ, ಸೆನೆಗಲ್‌, ದಕ್ಷಿಣ ಕೋರಿಯಾ, ಸ್ಪೇನ್‌, ಫ್ರಾನ್ಸ್‌, ಜೆಕ್ ಗಣರಾಜ್ಯ, ಪೊಲೇಂಡ್‌ ಸೇರಿದಂತೆ ರಷ್ಯಾಸಿನಿಮಾಗಳುಟಾಪ್‌ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ADVERTISEMENT

ಗಲ್ಲಿ ಬಾಯ್‌ ಸಿನಿಮಾ ಮೂಲಕರಣವೀರ್ ಸಿಂಗ್‌ ಮತ್ತು ಅಲಿಯಾ ಭಟ್‌ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದರು.ಜೋಯಾ ಅಖ್ತರ್ ನಿರ್ದೇಶನದ ಈ ಚಿತ್ರದಲ್ಲಿವಿಜಯ್‌ ರಾಜ್‌, ಸಿದ್ದಾಂತ್ ಚತುರ್ವೇದಿ, ವಿಜಯ್‌ ವರ್ಮಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರ 2018ರಫೆಬ್ರುವರಿಯಲ್ಲಿ ಬಿಡುಗಡೆಯಾಗಿತ್ತು.

ಮುಂಬೈನ ಬೀದಿಗಳಲ್ಲಿ ಹಿಪ್‌ಹಾಪ್‌ ನೃತ್ಯ ಮತ್ತು ‘ಮೇರೆ ಗಲ್ಲಿ ಮೇ’ ಹಾಡಿನಿಂದ ವಿಖ್ಯಾತಿ ಪಡೆದ ರ‍್ಯಾಪರ್‌ಗಳಾದ ವಿವಿ‌ಯನ್ ಫರ್ನಾಂಡಿಸ್ ಅಲಿಯಾಸ್ ಡಿವೈನ್‌ ಮತ್ತು ನಾವೇದ್‌ ಶೇಖ್‌ ಅಲಿಯಾಸ್ ನಾಜಿ ಅವರ ಜೀವನಾಧರಿತ ಕತೆಯೇ ‘ಗಲ್ಲಿ ಬಾಯ್‌’ ಆಗಿ ಮೂಡಿಬಂದಿದೆ.

ಗಲ್ಲಿ ಬಾಯ್‌ಹಲವು ವಿದೇಶಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇತ್ತೀಚಿಗೆ ಏಷ್ಯನ್‌ ಅಕಾಡೆಮಿ ಕ್ರಿಯೇಟಿವ್ ವಿಭಾಗದಲ್ಲಿ ‘ಭಾರತದ ಅತ್ಯುತ್ತಮ ಸಿನಿಮಾ’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಇಲ್ಲಿಯವರೆಗೂ ಭಾರತೀಯ ಯಾವುದೇ ಸಿನಿಮಾ ಆಸ್ಕರ್‌ ಪ್ರಶಸ್ತಿಯನ್ನು ಪಡೆದಿಲ್ಲ. ಅಂತಿಮ ಸುತ್ತಿನ ಟಾಪ್‌ ಹತ್ತರಲ್ಲಿ ಮದರ್‌ ಇಂಡಿಯಾ(1958), ಸಲಾಂ ಬಾಂಬೆ (1958), ಲಗ್ಗಾನ್‌ (2001) ಚಿತ್ರಗಳು ಸ್ಥಾನ ಪಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.