ADVERTISEMENT

ಮಾಸ್‌ ಮಹಾರಾಜ ರವಿ ತೇಜ ಅಭಿನಯದ ‘ರಾಮರಾವು‘ ಸಿನಿಮಾ ಜುಲೈಗೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 10:53 IST
Last Updated 23 ಜೂನ್ 2022, 10:53 IST
ರವಿ ತೇಜ
ರವಿ ತೇಜ   

ಹೈದರಾಬಾದ್‌: ತೆಲುಗಿನ ‘ಮಾಸ್‌ ಮಹಾರಾಜ‘ ಖ್ಯಾತಿಯ ರವಿ ತೇಜ ಅಭಿನಯದ ‘ರಾಮರಾವು ಆನ್‌ ಡ್ಯೂಟಿ‘ ಸಿನಿಮಾ ಜುಲೈ 29ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ಈ ಬಗ್ಗೆ ನಟರವಿ ತೇಜ ಟ್ವಿಟರ್‌ನಲ್ಲಿ ಪೋಸ್ಟರ್‌ ಪ್ರಕಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದೆ.

ನಿರ್ದೇಶಕ ಶರತ್ ಮಾಂಡವ ನಿರ್ದೇಶನದ ರಾಮರಾವ್ ಆನ್ ಡ್ಯೂಟಿ ಚಿತ್ರ ಆಕ್ಷನ್ ಸಿನಿಮಾವಾಗಿದೆ. ರವಿ ತೇಜ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡದ ಪ್ರಕಾರ ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ. ವೇಣು, ನಾಜರ್, ನರೇಶ್, ಪವಿತ್ರಾ ಲೋಕೇಶ್, ಜಾನ್ ವಿಜಯ್ ಮತ್ತು ತನಿಕೆಲ್ಲಾ ಭರಣಿ ಮುಂತಾದವರು ಚಿತ್ರದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.