ADVERTISEMENT

’ಪುಷ್ಪ’ ಅಂದ್ರೆ ಹೂವಲ್ಲ; ಬೆಂಕಿ! ಮಾಸ್ ಅವತಾರದಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ!

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 8:27 IST
Last Updated 13 ಜನವರಿ 2022, 8:27 IST
ಜಡೇಜಾ, ಅಲ್ಲು ಅರ್ಜುನ್‌
ಜಡೇಜಾ, ಅಲ್ಲು ಅರ್ಜುನ್‌   

ತೆಲುಗು ನಟ ಅಲ್ಲು ಅರ್ಜುನ್‌ ನಟನೆಯ ’ಪುಷ್ಪ’ ಸಿನಿಮಾ ಬಾಲಿವುಡ್‌ ಹಾಗೂ ಟಾಲಿವುಡ್‌ನಲ್ಲಿ ಧೂಳೆಬ್ಬಿಸುತ್ತಿದೆ. ಒಟ್ಟಾರೆ ₹ 325 ಕೋಟಿಗೂ ಹೆಚ್ಚು ಮೊತ್ತ ಬಾಚಿಕೊಂಡಿದೆ.

ಇತ್ತ ಸಿನಿಮಾದ ಹಾಡುಗಳು ಹಾಗೂ ದೃಶ್ಯಗಳನ್ನು ಅಭಿಮಾನಿಗಳು ಡಬ್‌ ಮಾಡುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕ್ರಿಕೆಟಿಗ ರವೀಂದ್ರ ಜಡೇಜಾ ಕೂಡ ಅಲ್ಲು ಅರ್ಜುನ್‌ ರೀತಿ ಇರುವಂತೆ ಖಡಕ್‌ ಲುಕ್‌ನಲ್ಲಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಕಾಮೆಂಟ್‌ ಮಾಡುತ್ತಿದ್ದು’ಕಿಲ್ಲರ್‌ ಬಾಯ್‌’ ಎಂದು ಹೇಳುತ್ತಿದ್ದಾರೆ.

ಜಡೇಜಾ ’ಪುಷ್ಪ’ ಲುಕ್​ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಚಕಿತಗೊಳಿಸಿದ್ದಾರೆ.ಜಡೇಜಾ ಮಾಸ್‌ ಲುಕ್‌ ನೋಡಿ ಅಲ್ಲು ಅರ್ಜುನ್ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಫೋಟೊ ಹಂಚಿಕೊಂಡಿರುವ ಅವರು ‘‘ಪುಷ್ಪ ಅಂದರೆ ಹೂವು ಎಂದುಕೊಂಡಿದ್ದೀರಾ? ಫೈರ್!’’ ಎಂದು ಬರೆದಿದ್ದಾರೆ.

ADVERTISEMENT

ಚಿತ್ರದಲ್ಲಿ ಇರುವ ಬೀಡಿ ಕೇವಲ ಸಾಂಕೇತಿಕ ಮಾತ್ರ. ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ. ಅವನ್ನು ಬಳಬಾರದು ಎಂದು ಜಡೇಜಾ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಜಡೇಜಾ ಅವರ ಮಾಸ್‌ ಲುಕ್‌ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.