ADVERTISEMENT

ರೆಜಿನಾ ‘ಡ್ರಾಗ್‌ ಕ್ವೀನ್’ ಅವತಾರ

​ಪ್ರಜಾವಾಣಿ ವಾರ್ತೆ
Published 24 ಮೇ 2020, 19:30 IST
Last Updated 24 ಮೇ 2020, 19:30 IST
ನಟಿ ರೆಜಿನಾ ಕಸ್ಸಂದ್ರ
ನಟಿ ರೆಜಿನಾ ಕಸ್ಸಂದ್ರ   
""

ಕೆ.ಎಂ. ಚೈತನ್ಯ ನಿರ್ದೇಶನದ ‘ಸೂರ್ಯಕಾಂತಿ’ ಚಿತ್ರದಲ್ಲಿ ‘ಕಾಂತಿ’ಯಾಗಿ ಮಿಂಚಿದ್ದರು ನಟಿ ರೆಜಿನಾ ಕಸ್ಸಂದ್ರ. ಚೆನ್ನೈ ಮೂಲದ ಈ ಬೆಡಗಿ ಬೆಳ್ಳಿತೆರೆ ಪ್ರವೇಶಿಸಿದ್ದು, ತಮಿಳಿನ ‘ಕಂದ ನಾಲ್‌ ಮುಧಲ್’ ಚಿತ್ರದ ಮೂಲಕ. ಒಂದೂವರೆ ದಶಕದ ವೃತ್ತಿಬದುಕಿನಲ್ಲಿ ತೆಲುಗು ಮತ್ತು ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಹಿಂದಿಯಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಅದು ಯಶಸ್ಸು ಕಾಣಲಿಲ್ಲ.

ತನ್ನ ಮೋಹಕ ಸೌಂದರ್ಯದಿಂದಲೇ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವುದು ರೆಜಿನಾ ಹೆಗ್ಗಳಿಕೆ. ಮತ್ತೊಂದೆಡೆ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುವುದಿಲ್ಲ. ಪ್ರಸ್ತುತ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ‘ಡ್ರಾಗ್‌ ಕ್ವೀನ್’ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಬೆರಗಾಗಿದ್ದಾರೆ.

‘ಡ್ರಾಗ್‌ ಕ್ವೀನ್‌’ ವೇಷದಲ್ಲಿರೆಜಿನಾ ಕಸ್ಸಂದ್ರ

ಮಹಿಳಾ ವೇಷಧಾರಿಯಾಗಿರುವ ಪುರುಷನಿಗೆ ‘ಡ್ರಾನ್ ಕ್ವೀನ್’ ಎನ್ನುತ್ತಾರೆ. ಕನ್ನಡದ ಬಿಗ್‌ಬಾಸ್‌ ಸೀಸನ್‌ 6ರಲ್ಲಿಬೆಂಗಳೂರಿನ ಪ್ರಪ್ರಥಮ ‘ಡ್ರಾಗ್‌ ಕ್ವೀನ್‌’ ಆ್ಯಡಮ್‌ ಪಾಶಾ ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಮಹಾನಗರಗಳ ಡಾನ್ಸ್‌ ಬಾರ್‌ಗಳಲ್ಲಿ ಕುಣಿಯುವುದು ಇವರ ಹವ್ಯಾಸ.

ADVERTISEMENT

ರೆಜಿನಾ ಅವರು ‘ಡ್ರಾಗ್‌ ಕ್ವೀನ್‌’ ಆಗಿ ಕಾಣಿಸಿಕೊಳ್ಳಲು ಆಕೆಯ ಮೇಕಪ್‌ ಆರ್ಟಿಸ್‌ ಪ್ರಕೃತಿ ಆನಂದ್ ಅವರೇ ಕಾರಣವಂತೆ. ‘ಡ್ರಾಗ್‌ ಕ್ವೀನ್‌ಗಳು ಧರಿಸುವ ಉಡುಪುಗಳು ವಿಭಿನ್ನವಾಗಿರುತ್ತವೆ. ಕೂದಲ ವಿನ್ಯಾಸ ಮತ್ತು ಮೇಕಪ್‌ ಬಹುಬೇಗ ನೋಡುಗರ ಗಮನ ಸೆಳೆಯುತ್ತದೆ. ನಾನು ಅದೇ ಅವತಾರ ತಳೆಯಲು ನನ್ನ ಮೇಕಪ್‌ ಆರ್ಟಿಸ್ಟ್ ಕೊಡುಗೆ ದೊಡ್ಡದು’ ಎಂದಿದ್ದಾರೆ ರೆಜಿನಾ. ಪ್ರಸ್ತುತ ಆಕೆ ತಮಿಳಿನ ‘ಕಲ್ಲಾಪಾರ್ಟ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.