ADVERTISEMENT

'ಆ್ಯಂಟ್–ಮ್ಯಾನ್ 3', 'ದಿ ಮಾರ್ವಲ್ಸ್‌' ಸಿನಿಮಾಗಳ ಬಿಡುಗಡೆ ದಿನಾಂಕ ಅದಲು–ಬದಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2022, 9:39 IST
Last Updated 30 ಏಪ್ರಿಲ್ 2022, 9:39 IST
   

ವಾಷಿಂಗ್ಟನ್: ಮಾರ್ವಲ್ಸ್‌ ಸ್ಟುಡಿಯೋಸ್ ತಯಾರಿಸುತ್ತಿರುವ 'ದಿ ಮಾರ್ವಲ್ಸ್‌' ಮತ್ತು'ಆ್ಯಂಟ್–ಮ್ಯಾನ್ 3' (ಆ್ಯಂಟ್–ಮ್ಯಾನ್ ಅಂಡ್ ವಾಸ್ಪ್: ಕ್ವಾಂಟಮೇನಿಯಾ) ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಅದುಲು–ಬದಲು ಮಾಡಲಾಗಿದೆ ಎಂದು 'ಡಿಸ್ನಿ' ಪ್ರಕಟಿಸಿದೆ.

ಈ ಮೊದಲು, 'ಕ್ಯಾಪ್ಟನ್‌ ಮಾರ್ವೆಲ್‌' ಸರಣಿಯ 'ದಿ ಮಾರ್ವಲ್ಸ್‌' ಸಿನಿಮಾ ಬಿಡುಗಡೆ ದಿನಾಂಕವನ್ನು 2023ರ ಫೆಬ್ರುವರಿ 17ಕ್ಕೆ ಮತ್ತು'ಆ್ಯಂಟ್–ಮ್ಯಾನ್ 3' ಚಿತ್ರವನ್ನು 2023ರ ಜುಲೈ 28ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಈಗ ಎರಡೂ ಚಿತ್ರಗಳ ಬಿಡುಗಡೆ ದಿನಾಂಕವನ್ನು ಅದಲು–ಬದಲು ಮಾಡಲಾಗಿದೆ. ಅದರಂತೆ,'ದಿ ಮಾರ್ವಲ್ಸ್‌'ಜುಲೈ 28ಕ್ಕೆ ಮತ್ತು'ಆ್ಯಂಟ್–ಮ್ಯಾನ್ 3'ಫೆಬ್ರುವರಿ 17ರಂದು ತೆರೆ ಮೇಲೆ ಬರಲಿವೆ.

'ಮಾರ್ವಲ್‌ ಸ್ಟುಡಿಯೋಸ್‌'ನ ಈ ನಡೆ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.

ADVERTISEMENT

'ಆ್ಯಂಟ್ ಮ್ಯಾನ್‌ 3' ಸಿನಿಮಾದಲ್ಲಿ ಪೌಲ್‌ ರುಡ್‌, ಎವಂಗ್‌ಲೈನ್‌ ಲಿಲ್ಲಿ, ಮಿಚೆಲ್ಲೆ ಫೆಯ್ಫೆರ್‌, ಮಿಖಾಯಿಲ್ ಡಗ್ಲಾಸ್‌, ಜೊನಾಥನ್ ಮೇಜರ್ಸ್‌ ಮತ್ತು ಕ್ಯಾಥರಿನ್ ನ್ಯೂಟನ್ ಕಾಣಿಸಿಕೊಳ್ಳಲಿದ್ದಾರೆ.

ಅದೇರೀತಿ, ದಿ ಮಾರ್ವಲ್ಸ್‌ ಚಿತ್ರದಮುಖ್ಯಪಾತ್ರಗಳಲ್ಲಿ ಬ್ರೈ ಲಾರ್ಸನ್‌, ಸ್ಯಾಮುವೆಲ್‌ ಎಲ್‌. ಜಾಕ್ಸನ್‌, ಟೆಯೊನಾಹ್‌ ಪ್ಯಾರಿಸ್‌ ಮತ್ತು ಇಮಾನ್‌ ವೆಲ್ಲಾನಿ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.