ADVERTISEMENT

ಬರ್ಲಿನ್ ಚಿತ್ರೋತ್ಸವಕ್ಕೆ ರಿಯಾ ಶುಕ್ಲಾ ನಿರ್ದೇಶನದ ಕಿರುಚಿತ್ರ Ruse ಆಯ್ಕೆ

ಪಿಟಿಐ
Published 3 ಫೆಬ್ರುವರಿ 2025, 13:14 IST
Last Updated 3 ಫೆಬ್ರುವರಿ 2025, 13:14 IST
<div class="paragraphs"><p>ರಿಯಾ ಶುಕ್ಲಾ</p></div>

ರಿಯಾ ಶುಕ್ಲಾ

   

ಲಲಿಂಕ್ಡ್‌ಇನ್‌ ಚಿತ್ರ

ನವದೆಹಲಿ: ವಿದ್ಯಾರ್ಥಿಯೂ ಆಗಿರುವ ಚಿತ್ರ ನಿರ್ದೇಶಕಿ ರಿಯಾ ಶುಕ್ಲಾ ಅವರ ‘ರೂಸ್‌’ ಎಂಬ ಕಿರುಚಿತ್ರವು ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 75ನೇ ಆವೃತ್ತಿಯಲ್ಲಿ ಜನರೇಷನ್‌ ಕೆಪ್ಲಸ್ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ADVERTISEMENT

ದೆಹಲಿ ಮೂಲದ ರಿಯಾ ಅವರು ಈ ಚಿತ್ರ ನಿರ್ದೇಶಿಸಿದ್ದಾರೆ. ಈ ವಿಭಾಗಕ್ಕೆ ಆಯ್ಕೆಯಾದ 15 ಚಿತ್ರಗಳಲ್ಲಿ ರೂಸ್ ಕೂಡಾ ಒಂದು. ಬರ್ಲಿನ್ ಚಿತ್ರೋತ್ಸವವು ಫೆ. 13ರಿಂದ 23ರವರೆಗೆ ಆಯೋಜನೆಗೊಂಡಿದೆ.

29 ವರ್ಷದ ರಿಯಾ ಅವರು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಕಲೆ, ಚಿತ್ರಕತೆ ಮತ್ತು ನಿರ್ದೇಶನ ವಿಷಯ ಕುರಿತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

‘ಯುವಮನಸ್ಸುಗಳು ನನ್ನೊಂದಿಗೆ ಜತೆಗೂಡಿದ ಪರೀಣಾಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಮುಂಗಾರು ಮಳೆಯ ಒಂದು ಮಧ್ಯಾಹ್ನ ಮೂವರು ಯುವತಿಯರು ನೃತ್ಯ ಕಲಿಯುತ್ತಿರುವ ಕಥೆಯಾಧಾರಿತ ಚಿತ್ರ ಇದಾಗಿದೆ. ಸಾಮಿಪ್ಯವು ಬದುಕಿನ ಹಾದಿಯ ದಿಕ್ಕನ್ನೇ ಬದಲಿಸಬಹುದು. ಮೂವರು ಯುವತಿಯರ ಒಡನಾಟ, ಹೇಳಲಾಗದ ಅವರ ಬಯಕೆ, ಸನ್ಹೆ ಮೂಲಕವೇ ಅವರ ಸಂಭಾಷಣೆ ಈ ಎಲ್ಲವನ್ನೂ ಈ ಕಿರುಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ’ ಎಂದು ರಿಯಾ ಶುಕ್ಲಾ ಹೇಳಿದ್ದಾರೆ.

ಬರ್ಲಿನ್ ಚಿತ್ರೋತ್ಸವದ ಜನರೇಷನ್‌ ಕೆಪ್ಲಸ್‌ ವಿಭಾಗದಲ್ಲಿ ಮಕ್ಕಳು ಮತ್ತು ಯುವಜನತೆಗೆ ವೇದಿಕೆ ಕಲ್ಪಿಸಲಾಗುತ್ತದೆ. ಈ ಹಿಂದೆ ‘ಮಧು’ ಎಂಬ ಚಿತ್ರದಲ್ಲಿ ಸೃಜನಶೀಲ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದರು. ಈ ಚಿತ್ರ ರಾಟುಡಾಮ್‌ ಅಂಡ್‌ ಲಿಂಕನ್ ಸೆಂಟರ್‌ನಲ್ಲಿ ಪ್ರದರ್ಶನ ಕಂಡು, ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿತ್ತು. ‘ಐ ವಾನಾ ಬಿ ಲೈಕ್‌ ಯು’ ಎಂಬ ಗೀತೆಯನ್ನೂ ರಿಯಾ ಶುಕ್ಲಾ ನಿರ್ದೇಶಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.