ADVERTISEMENT

Sandalwood: ಅಮೆಜಾನ್ ಪ್ರೈಮ್‌ನಲ್ಲಿ ‘ರಿಪ್ಪನ್ ಸ್ವಾಮಿ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 23:30 IST
Last Updated 12 ಅಕ್ಟೋಬರ್ 2025, 23:30 IST
ವಿಜಯ್‌ ರಾಘವೇಂದ್ರ
ವಿಜಯ್‌ ರಾಘವೇಂದ್ರ   

ವಿಜಯ್ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಮರ್ಡರ್‌, ಮಿಸ್ಟ್ರಿ ಹೊಂದಿರುವ ಚಿತ್ರಕ್ಕೆ ಕಿಶೋರ್ ಮೂಡಬಿದ್ರೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ತೆರೆಕಂಡ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.

‘ಒಬ್ಬ ಮನುಷ್ಯನಿಗೆ ಚಿಕ್ಕಂದಿನಲ್ಲಿಯೇ ಎದುರಾದ ಬೇಡದ ಸಂಬಂಧ ತನ್ನ ಮದುವೆಯಲ್ಲೂ ಮುಂದುವರೆದರೆ ಅವನ ಮನಸ್ಥಿತಿ ಹೇಗಾಗಬೇಡ? ಆತ ಪ್ರೀತಿ ಮಾಡಿದವಳನ್ನು ದ್ವೇಷಿಸಬೇಕಾ? ಕ್ಷಮಿಸಬೇಕಾ? ಎಂಬುದೇ ಸಿನಿಮಾ. ಸ್ವಾಮಿಯಾಗಿ ವಿಜಯ್ ರಾಘವೇಂದ್ರ ಅವರು ಎಲ್ಲರನ್ನೂ ಕಾಡುತ್ತಾರೆ’ ಎಂದಿದ್ದಾರೆ ನಿರ್ದೇಶಕರು.

ಪಂಚಾನನ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ಸಿದ್ಧಗೊಂಡ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ಅಶ್ವಿನಿ ಜೋಡಿಯಾಗಿದ್ದಾರೆ. ಸ್ಯಾಮ್ಯುವೆಲ್ ಅಭಿ ಸಂಗೀತ, ರಂಗನಾಥ್ ಸಿ.ಎಂ ಛಾಯಾಚಿತ್ರಗ್ರಹಣ, ಶಶಾಂಕ್ ನಾರಾಯಣ್ ಸಂಕಲನವಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.