ರಿಷಬ್ ಶೆಟ್ಟಿ ಹಾಗೂ ಅಮಿತಾಬ್ ಬಚ್ಚನ್
ಚಿತ್ರ: ರಿಷಬ್ ಶೆಟ್ಟಿ/ ಇನ್‌ಸ್ಟಾಗ್ರಾಮ್
ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ.
ಇಂದು (ಶನಿವಾರ) ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬ. ಹೀಗಾಗಿ ನಟ ರಿಷಬ್ ಶೆಟ್ಟಿ ಬಾಲಿವುಡ್ ಬಿಗ್ ಬಿ ಜೊತೆಗಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಈ ಬಗ್ಗೆ ಪೋಸ್ಟ್ ಹಂಚಿಕೊಂಡ ರಿಷಬ್ ಶೆಟ್ಟಿ, ‘ಕಾಂತಾರ ಚಾಪ್ಟರ್ 1 ತಂಡವು ಭಾರತೀಯ ಚಿತ್ರರಂಗದ ದಂತಕಥೆ ಅಮಿತಾಬ್ ಬಚ್ಚನ್ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತದೆ. 'ಕೌನ್ ಬನೇಗಾ ಕರೋಡ್‌ಪತಿ' ಮುಂಬರುವ ಸಂಚಿಕೆಗಾಗಿ ಉತ್ಸುಕನಾಗಿದ್ದೇನೆ. ನಿಮ್ಮೊಂದಿಗೆ ಸೇರಲು ತುಂಬಾ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.
ನಟ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಅ. 2ರಂದು ಅದ್ದೂರಿಯಾಗಿ ತೆರೆಕಂಡಿತ್ತು. ಇದೀಗ ಸಿನಿಮಾ ಬಿಡುಗಡೆಯಾಗಿ ಮೊದಲ ವಾರದಲ್ಲೇ ₹509.25 ಕೋಟಿ ಗಳಿಕೆ ಮಾಡಿದೆ. ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಬಿಡುಗಡೆಯಾಗಿದ್ದ 'ಕಾಂತಾರ ಚಾಪ್ಟರ್ 1' ಸಿನಿಮಾ ಉತ್ತರ ಅಮೆರಿಕದಲ್ಲೇ ಸುಮಾರು ₹26 ಕೋಟಿಗೂ ಅಧಿಕ ಹಣ ಗಳಿಸಿದೆ.
ಬಿಡುಗಡೆಯಾದ ದಿನವೇ ಈ ಸಿನಿಮಾದ 12 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದವು. ಸಿನಿಮಾ ಬಿಡುಗಡೆಯಾಗಿ ವಾರ ಉರುಳಿದ್ದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವುದು ನಿಂತಿಲ್ಲ. ಶುಕ್ರವಾರ(ಅ.10) ಬುಕ್‌ಮೈಶೋನಲ್ಲಿ ಪ್ರತಿ ಗಂಟೆಗೆ ಸುಮಾರು 30 ಸಾವಿರ ಟಿಕೆಟ್‌ಗಳ ಮಾರಾಟ ಕಂಡುಬಂತು. ಬೆಂಗಳೂರಿನಲ್ಲಿ ನೂರಕ್ಕೂ ಅಧಿಕ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಕಾಂತಾರ' ಸಿನಿಮಾ ಪ್ರದರ್ಶನ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.