ADVERTISEMENT

ಪರದೆ ಮೇಲೆ ಗೋಪಿಚಂದ್‌– ತಮನ್ನಾ ವೈರತ್ವ!

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 10:58 IST
Last Updated 22 ಜೂನ್ 2020, 10:58 IST
‘ಸಿಟಿಮಾರ್‌’ ಚಿತ್ರದ ಪೋಸ್ಟರ್‌
‘ಸಿಟಿಮಾರ್‌’ ಚಿತ್ರದ ಪೋಸ್ಟರ್‌   

ಗೋಪಿಚಂದ್‌ ನಟನೆಯ ತೆಲುಗಿನ ‘ಸಿಟಿಮಾರ್‌’ ಕ್ರೀಡಾ ಕಥಾಹಂದರ ಹೊಂದಿರುವ ಚಿತ್ರ. ಸಂಪತ್‌ ನಂದಿ ಆ್ಯಕ್ಷನ್ ಕಟ್‌ ಹೇಳಿರುವ ಇದಕ್ಕೆ ತಮನ್ನಾ ಭಾಟಿಯಾ ನಾಯಕಿ. ಕಬಡ್ಡಿ ಆಟದ ಸುತ್ತ ಇದರ ಕಥೆ ಹೆಣೆಯಲಾಗಿದೆ. ಅಂದಹಾಗೆ ಗೋಪಿಚಂದ್‌ ಮತ್ತು ತಮನ್ನಾ ಇಬ್ಬರೂ ಇದರಲ್ಲಿ ಕೋಚ್‌ಗಳಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ಟಾಲಿವುಡ್‌ ಅಂಗಳದ ಸುದ್ದಿ.

ಗೋಪಿಚಂದ್‌ ಅವರದ್ದು ಆಂಧ್ರಪ್ರದೇಶ ತಂಡದ ಕೋಚ್‌ ಪಾತ್ರವಂತೆ. ತಮನ್ನಾ ಜ್ವಾಲಾ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಕೆ ತೆಲಂಗಾಣ ತಂಡದ ಕೋಚ್‌ ಆಗಿ ನಟಿಸಿದ್ದಾರೆ. ಇಬ್ಬರೂ ಎದುರಾಳಿ ತಂಡಗಳ ಕೋಚ್‌ ಆಗಿ ಕಾಣಿಸಿಕೊಂಡಿರುವುದು ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದೆ. ಪರದೆ ಮೇಲೆ ಇಬ್ಬರ ವೈರತ್ವ ಹೇಗೆ ಮೂಡಿಬರಲಿದೆ ಎಂಬುದು ಅಭಿಮಾನಿಗಳಿಗೆ ಕಾತರ. ಚಿತ್ರಕ್ಕೆ ಶ್ರೀನಿವಾಸ ಚಿತ್ತೂರಿ ಬಂಡವಾಳ ಹೂಡಿದ್ದಾರೆ. ಮಣಿ ಶರ್ಮ ಅವರ ಸಂಗೀತವಿದೆ.

‘ಬಹುತೇಕ ಸಂದರ್ಭಗಳಲ್ಲಿ ಕೋಚ್‌ ಹುದ್ದೆಯ ಮೇಲೆ ಕ್ರೀಡಾ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯಗಳಿರುವುದಿಲ್ಲ. ಆದರೆ, ಸಿಟಿಮಾರ್‌ ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಹೆಮ್ಮೆಯಿದೆ. ಚಿತ್ರದ ಕಥೆಯೂ ಆಸಕ್ತಿದಾಯಕವಾಗಿದೆ. ಭಾರತೀಯ ಕ್ರೀಡಾ ರಂಗಕ್ಕೆ ಅನುಪಮ ಸೇವೆ ಸಲ್ಲಿಸಿದ ಕೋಚ್‌ಗಳಾದ ರಮಾಕಾಂತ್‌ ಅರ್ಚೇಕರ್‌, ಗುರು ಹನುಮಾನ್‌, ಪುಲ್ಲೇಲ ಗೋಪಿಚಂದ್‌, ಸತ್ಪಾಲ್‌ ಸಿಂಗ್‌ ಅವರಿಗೆ ಈ ನನ್ನ ಪಾತ್ರವನ್ನು ಅರ್ಪಿಸುತ್ತೇನೆ’ ಎಂದು ತಮನ್ನಾ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.