ಶಿಕ್ಷಕಿ ವಿಜಯ ನರೇಶ್ ನಿರ್ದೇಶನದ ‘ರಿಯಾ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟರಾದಪ್ರಥಮ್ ಹಾಗೂ ಪ್ರತಾಪ್ ಸಿಂಹ ಟ್ರೇಲರ್ ಬಿಡುಗಡೆ ಮಾಡಿದರು. ಸೆ. 16ರಂದು ಈ ಚಿತ್ರ ಬಿಡುಗಡೆಯಾಗಲಿದೆ.
‘ಇದು ಹಾರರ್ ಚಿತ್ರ. ಒಂದೇ ಮನೆಯೊಳಗೆ ನಡೆಯುವ ಕಥೆ. ಚಿತ್ರದಲ್ಲಿ 16 ಪಾತ್ರಗಳಿವೆ’ ಎಂದರು ಪ್ರಧಾನ ಪಾತ್ರಧಾರಿ ಕಾರ್ತಿಕ್ ವರ್ಣೇಕರ್. ಸಾವಿತ್ರಿ ಈ ಚಿತ್ರದ ನಾಯಕಿ. ಕಣಿಗೊಂಡ ನರೇಶ್ ಈ ಚಿತ್ರದ ನಿರ್ಮಾಪಕರು.
ಬೇಬಿ ಅನನ್ಯಾ, ವಿಕಾಸ್, ಶ್ವೇತಾ, ರಾಜ್ ಉದಯ್ ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.