
ವಿಜಯ್ ದೇವರಕೊಂಡ
ನಟ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾದ ಶೀರ್ಷಿಕೆ ಇತ್ತೀಚೆಗೆ ಅನಾವರಣಗೊಂಡಿತು.
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್‌ನ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ಚಿತ್ರಕ್ಕೆ ‘ರೌಡಿ ಜನಾರ್ದನ’ ಎಂಬ ಹೆಸರು ಇಡಲಾಗಿದೆ. ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ನಿರ್ಮಾಣದ ಈ ಚಿತ್ರವನ್ನು ‘ರಾಜಾ ವಾರು ರಾಣಿ ಗಾರು’ ಖ್ಯಾತಿಯ ನಿರ್ದೇಶಕ ರವಿ ಕಿರಣ್ ಕೋಲಾ ನಿರ್ದೇಶಿಸುತ್ತಿದ್ದಾರೆ. ರಕ್ತಸಿಕ್ತವಾದ ಹಾಗೂ ರಾ ಆ್ಯಕ್ಷನ್‌ನಲ್ಲಿ ಕಾಣಿಸಿಕೊಂಡಿರುವ ವಿಜಯ್ ಪಾತ್ರದ ಲುಕ್ ಕುತೂಹಲವನ್ನು ಹೆಚ್ಚಿಸಿದೆ. ವಿಜಯ್ ದೇವರಕೊಂಡ ಈ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದೆ ಚಿತ್ರತಂಡ.
1980ರ ಕಾಲಘಟ್ಟದ ಪೂರ್ವ ಗೋದಾವರಿ ಜಿಲ್ಲೆಯ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗಲಿದ್ದು, ವಿಜಯ್ ಈ ಚಿತ್ರಕ್ಕಾಗಿ ವಿಶೇಷವಾಗಿ ಗೋದಾವರಿ ಭಾಷಾಸೊಗಡು ಕಲಿತಿದ್ದಾರೆ. ಚಿತ್ರಕ್ಕೆ ಆನೆಂಡ್ ಸಿ. ಚಂದ್ರನ್ ಛಾಯಾಚಿತ್ರಗ್ರಹಣ, ಕ್ರಿಸ್ಟೋ ಕ್ಸೇವಿಯರ್ ಸಂಗೀತ ಮತ್ತು ಸುಪ್ರೀಂ ಸುಂದರ್ ಸಾಹಸ ನಿರ್ದೇಶನವಿದೆ. ಸಿನಿಮಾ 2026ರ ಡಿಸೆಂಬರ್‌ನಲ್ಲಿ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.