ADVERTISEMENT

ಆರ್‌ಆರ್‌ಆರ್‌: ಅಜಯ್ ದೇವಗನ್– ಆಲಿಯಾ ಪಾತ್ರದ ಬಗ್ಗೆ ತುಟಿ ಬಿಚ್ಚಿದ ರಾಜಮೌಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2021, 4:57 IST
Last Updated 31 ಡಿಸೆಂಬರ್ 2021, 4:57 IST
ಪೆನ್ ಮೂವಿಸ್ ವಿಡಿಯೊ ಸ್ಕ್ರೀನ್ ಗ್ರ್ಯಾಬ್
ಪೆನ್ ಮೂವಿಸ್ ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ನವದೆಹಲಿ: ರಾಮ ಚರಣ್ ಮತ್ತು ಜೂ.ಎನ್‌ಟಿಆರ್ ಅವರ ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ಸಿನಿಮಾದಲ್ಲಿ ಬಾಲಿವುಡ್ ತಾರೆಯರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಪಾತ್ರಗಳ ಬಗ್ಗೆ ನಿರ್ದೇಶಕ ಎಸ್.ಎಸ್. ರಾಜಮೌಳಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಚಿತ್ರದಲ್ಲಿ ಯಾವುದೇ ಒಂದು ಪಾತ್ರದ ಮಹತ್ವವು ಅದು ಕಾಣಿಸಿಕೊಳ್ಳುವ ಹೆಚ್ಚಿನ ಸಮಯದಿಂದ ನಿರ್ಧಾರವಾಗುವುದಿಲ್ಲ. ಇದರಲ್ಲಿ ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಪಾತ್ರಗಳೂ ಸಹ ಕಡಿಮೆ ಸಮಯವಿದ್ದರೂ ಅತ್ಯಂತ ಮುಖ್ಯವಾದವುಗಳಾಗಿವೆ. ಆರ್‌ಆರ್‌ಆರ್‌ ಸಿನಿಮಾವನ್ನು ಒಂದು ದೇಹವೆಂದುಕೊಂಡರೆ ಅಜಯ್ ದೇವಗನ್ ಅದರ ಆತ್ಮವಾಗಿದ್ದಾರೆ. ಚಿತ್ರದಲ್ಲಿ ಎರಡು ಪವರ್ ಹೌಸ್‌ಗಳು(ರಾಮ್ ಚರಣ್, ಜ್ಯೂ..ಎನ್‌ಟಿಆರ್) ಇರುವುದನ್ನು ನೀವು ನೋಡಿದ್ದೀರಿ. ಆ ಎರಡೂ ಶಕ್ತಿಗಳನ್ನು ಸಮತೋಲನಗೊಳಿಸಲು ಇರುವ ಪಾತ್ರವೇ ಸೀತಾ. ಆ ಪಾತ್ರವನ್ನು ಆಲಿಯಾ ಭಟ್ ನಿರ್ವಹಿಸಿದ್ದಾರೆ’ಎಂದು ರಾಜಮೌಳಿ ಹೇಳಿದರು.

‘ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಅತಿಥಿ ಪಾತ್ರವನ್ನು ನಿರ್ವಹಿಸುತ್ತಿದ್ಧಾರೆ. ಅವರ ಪಾತ್ರಗಳ ಕುರಿತಾಗಿ ನಾನು ಪ್ರೇಕ್ಷಕರನ್ನು ಮೋಸಗೊಳಿಸುತ್ತಿಲ್ಲ. ಪಾತ್ರಗಳ ಪ್ರಾಮುಖ್ಯತೆ ವಿಷಯಕ್ಕೆ ಬಂದರೆ, ಅವರು ಹೀರೊಗಳಿಗೆ ಸಮಾನ ಮತ್ತು ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಆಗಿರುತ್ತಾರೆ’ ಎಂದು ಹೇಳಿದರು.

ADVERTISEMENT

ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ಸಮುದ್ರಕನಿ, ಅಲಿಸನ್ ಡೂಡಿ, ರೇ ಸ್ಟೀವನ್ಸನ್ ಅವರಂತಹ ಖ್ಯಾತನಾಮರನ್ನು ಈ ಚಿತ್ರ ಒಳಗೊಂಡಿದೆ. ಇದು ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಕುರಿತಾದ ಚಿತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.