ADVERTISEMENT

ರಾಣಾ ದಗ್ಗುಬಾಟಿ -ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಒಟಿಟಿಯಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜುಲೈ 2022, 11:43 IST
Last Updated 1 ಜುಲೈ 2022, 11:43 IST
 ‘ವಿರಾಟ ಪರ್ವಂ’ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ -ಸಾಯಿ ಪಲ್ಲವಿ
‘ವಿರಾಟ ಪರ್ವಂ’ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ -ಸಾಯಿ ಪಲ್ಲವಿ   

ಬೆಂಗಳೂರು: ತೆಲುಗು ನಟ ರಾಣಾ ದಗ್ಗುಬಾಟಿ -ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಸಿನಿಮಾ ಇಂದಿನಿಂದ (ಶುಕ್ರವಾರ) ಒಟಿಟಿಯಲ್ಲಿ ಬಿಡುಗಡೆಯಾಗಿದೆ.

‘ನೆಟ್‌ಫ್ಲಿಕ್ಸ್‌’ನಲ್ಲಿ ಚಿತ್ರ ವೀಕ್ಷಣೆ ಲಭ್ಯವಿದೆಎಂದು ಚಿತ್ರತಂಡ ಮಾಹಿತಿ ನೀಡಿದೆ.

ವೇಣು ಉಡುಗಾಲ ನಿರ್ದೇಶನದ ಈ ಸಿನಿಮಾ ಜೂನ್ 17ರಂದು ತೆಲುಗಿನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ಸುರೇಶ್ ಪ್ರೊಡಕ್ಷನ್ ಮತ್ತು ಶ್ರೀಲಕ್ಷ್ಮಿ ವೆಂಕಟೇಶ್ವರ‌ ಸಿನಿಮಾಸ್ ಚಿತ್ರಕ್ಕೆಬಂಡವಾಳ‌ ಹೂಡಿದ್ದವು.

ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ನಕ್ಸಲ್‌ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಟನಾ ಸಾಮರ್ಥ್ಯ ಬೇಡುವ‌ ಈ ಸಿನಿಮಾದಲ್ಲಿಆಕೆಯದ್ದು‌ ಪ್ರಧಾನ ಪಾತ್ರ ಎಂದು ಚಿತ್ರತಂಡ ಹೇಳಿದೆ.

ಚಿತ್ರದಮುಖ ಪಾತ್ರದಲ್ಲಿ ಪ್ರಿಯಾಮಣಿ ಕೂಡ ಇದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.