ADVERTISEMENT

ಬ್ರಿಟಿಷರು ಬರುವವರೆಗೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ ಎಂದ ಸೈಫ್‌ ಅಲಿ ಖಾನ್‌

ಚರ್ಚೆಗೆ ಗ್ರಾಸವಾಯ್ತು ಹೇಳಿಕೆ * ಟ್ವಿಟರ್‌ನಲ್ಲಿ ಅನೇಕರಿಂದ ತಿರುಗೇಟು

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 10:41 IST
Last Updated 22 ಜನವರಿ 2020, 10:41 IST
ಸೈಫ್‌ ಅಲಿ ಖಾನ್‌
ಸೈಫ್‌ ಅಲಿ ಖಾನ್‌   

ಬ್ರಿಟಿಷರು ಬರುವವರೆಗೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ ಎಂದು ನಟಸೈಫ್‌ ಅಲಿ ಖಾನ್‌ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಖಾನ್ ಹೇಳಿಕೆಗೆ ಟ್ವಿಟರ್‌ನಲ್ಲಿ ಅನೇಕರು ತಿರುಗೇಟು ನೀಡಿದ್ದಾರೆ.

‘ತಾನಾಜಿ: ದಿ ಅನ್‌ಸಂಗ್‌ ವಾರಿಯರ್‌’ ಸಿನಿಮಾದಲ್ಲಿಉದಯ್‌ ಭಾನು ಸಿಂಗ್‌ ಪಾತ್ರ ಮಾಡಿದ್ದ ಅವರು ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ,ಬ್ರಿಟಿಷರು ಬರುವವರೆಗೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ ಎಂದು ಹೇಳಿದ್ದರು.ನನಗೆ ಇತಿಹಾಸ ಬಗ್ಗೆ ಸಾಕಷ್ಟು ಅರಿವಿದೆ ಎಂದೂ ಹೇಳಿದ್ದರು.

ಇದಕ್ಕೆ ಟ್ವಿಟರ್‌ನಲ್ಲಿ ಅನೇಕರು ತಿರುಗೇಟು ನೀಡಿದ್ದಾರೆ.

ADVERTISEMENT

‘ಬ್ರಿಟಿಷರು ಬರುವವರೆಗೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ ಎಂದು ಬಾಲಿವುಡ್‌ನ ಇತಿಹಾಸ ತಜ್ಞ ಸೈಫ್ ಅಲಿ ಖಾನ್ ಪ್ರತಿಪಾದಿಸಿದ್ದಾರೆ. ಸರಿ, ಹಾಗಿದ್ದರೆ ‌ಈಸ್ಟ್‌ ಇಂಡಿಯಾ ಕಂಪನಿ ಚೀನಾಕ್ಕೆ ಸಂಬಂಧಿಸಿದ್ದು ಮತ್ತು ವಾಸ್ಕೊ ಡ ಗಾಮಾ ಫಿಜಿಗೆ ತೆರಳಿದ್ದ. ಕಳೆದ ಬಾರಿ ಖಾನ್ ಅವರು ಮಗನಿಗೆ ‘ತೈಮೂರ್’ ಎಂದು ಹೆಸರಿಡುವ ಮೂಲಕ ಇತಿಹಾಸವನ್ನು ಸ್ಮರಿಸಿಕೊಂಡಿದ್ದರು’ ಎಂದು ಲೇಖಕ ತಾರೀಖ್ ಫತಾಹ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಸಹ ಇದೇ ರೀತಿ ವ್ಯಂಗ್ಯವಾಡಿದ್ದಾರೆ. ‘ತೈಮೂರ್ ಕ್ರೂರ ಎಂಬುದನ್ನು ಟರ್ಕಿಯವರೂ ಒಪ್ಪಿದ್ದಾರೆ. ಆದರೆ ಕೆಲವರು ಅವರ ಮಕ್ಕಳಿಗೆ ತೈಮೂರ್‌ನ ಹೆಸರಿಡುತ್ತಾರೆ’ ಎಂದು ಲೇಖಿ ಟ್ವೀಟ್ ಮಾಡಿದ್ದಾರೆ.

ಕೆಲವರು ಸೈಫ್‌ಗೆ ಬೆಂಬಲವನ್ನೂ ಸೂಚಿಸಿದ್ದು, ಚರ್ಚೆಯಲ್ಲಿ ಅವರ ಮಗನ ಹೆಸರು ಎಳೆದು ತಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಬ್ರಿಟಿಷರು ಬರುವವರೆಗೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ...: ಇತಿಹಾಸ ತಜ್ಞ ಸೈಫ್ ಅಲಿ ಖಾನ್.. ಅಣ್ಣಾ, ಹಾಗಿದ್ದರೆ ಈಸ್ಟ್ ಇಂಡಿಯಾ ಕಂಪನಿಗೆ ಬ್ರಿಟಿಷರು ಜಾಂಟಿ ರೋಡ್ಸ್‌ ಮಗಳ ಹೆಸರನ್ನು ಇಟ್ಟಿದ್ದರೇ?’ ಎಂದು ಏಕಿತಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮಗನ ಹೆಸರಿಗೆ ಸಂಬಂಧಿಸಿ ಈ ಹಿಂದೆಯೇ ಸೈಫ್ ಅಲಿ ಖಾನ್ ಸ್ಪಷ್ಟನೆ ನೀಡಿದ್ದರು. ಐತಿಹಾಸಿಕ ವ್ಯಕ್ತಿಯ ಹೆಸರನ್ನು ಮಗನಿಗೆ ಇಟ್ಟಿಲ್ಲ ಎಂದೂ ಹೇಳಿದ್ದರು. ‘ಟರ್ಕಿಯ ಆಡಳಿತಗಾರನ ಬಗ್ಗೆ ನನಗೆ ತಿಳಿದಿದೆ. ಅವನ ಹೆಸರನ್ನು ಮಗನಿಗೆ ಇಟ್ಟಿಲ್ಲ. ಅದೇ ರೀತಿಯ ಹೆಸರು ಹೌದು. ಆದರೆ, ಎರಡರ ಮಧ್ಯೆ ವ್ಯತ್ಯಾಸವಿದೆ. ಟರ್ಕಿಯ ಆಡಳಿತಗಾರನ ಹೆಸರುTimur, ನನ್ನ ಮಗನ ಹೆಸರು Taimur’ ಎಂದು ಖಾನ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.