ADVERTISEMENT

ಸಲ್ಮಾನ್‌ ತೋಳಲ್ಲಿ ಕಂದ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 19:30 IST
Last Updated 19 ಜನವರಿ 2020, 19:30 IST
ಸಲ್ಮಾನ್‌ ಖಾನ್‌ ತೋಳಿನಲ್ಲಿ ಅರ್ಪಿತಾ ಮಗು
ಸಲ್ಮಾನ್‌ ಖಾನ್‌ ತೋಳಿನಲ್ಲಿ ಅರ್ಪಿತಾ ಮಗು   

ಬಾಲಿವುಡ್‌ ಭಾಯಿಜಾನ್‌ ಸಲ್ಮಾನ್‌ ಖಾನ್‌ ಸಹೋದರಿ ಅರ್ಪಿತಾ ಖಾನ್‌ ಮತ್ತು ಆಯುಷ್‌ ಶರ್ಮಾ ದಂಪತಿಯು ಇತ್ತೀಚೆಗೆ ಜನಿಸಿದ ತಮ್ಮ ಎರಡನೇ ಮಗುವಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಸಹೋದರ ಸಲ್ಮಾನ್‌ ಖಾನ್‌ ಜನ್ಮ ದಿನವಾದ ಡಿಸೆಂಬರ್‌ 27ರಂದು ಅರ್ಪಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.ಮಗಳಿಗೆ ಅಯಾತ್‌ ಎಂದು ಹೆಸರಿಟ್ಟಿದ್ದಾರೆ. ಮಗುವನ್ನು ಸಲ್ಮಾನ್‌ ಕೈಯಲ್ಲಿ ಎತ್ತಿಕೊಂಡು ಮುದ್ದಾಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಲ್ಮಾನ್‌ ತೋಳಿನಲ್ಲಿ ಹಾಯಾಗಿ ನಿದ್ರಿಸುತ್ತಿರುವಅಯಾತ್‌ ಚಿತ್ರದಲ್ಲಿ ಸಲ್ಮಾನ್‌ ತಾಯಿ ಕೂಡ ಇದ್ದಾರೆ.ಚಿತ್ರಕ್ಕೆ ಅರ್ಪಿತಾ ಬರೆದಿರುವ ಹೃದಯಸ್ಪರ್ಶಿ ಅಡಿ ಬರಹ ಎಲ್ಲರ ಮನತಟ್ಟಿದೆ.

ADVERTISEMENT

‘ನೀನು ಸದಾ ನನ್ನೊಂದಿಗಿರುವ ಒಂದೇ ಕಾರಣಕ್ಕಾಗಿ ಹೆದರಿಕೆ ಎಂಬ ಪದ ನನ್ನ ಹತ್ತಿರವೂ ಸುಳಿಯದು. ನನಗೆ ಸದಾ ನೀನುಕಾವಲಾಗಿ ನಿಂತಿರುವೆ ಎಂದು ನನಗೆ ಚೆನ್ನಾಗಿ ಗೊತ್ತು. ನಿನ್ನ ಸುರಕ್ಷಿತ ಕೈಗಳಲ್ಲಿರುವ ಅಯಾತ್‌ ಬಗ್ಗೆಯೂ ನನಗೆ ಯಾವ ಚಿಂತೆಯೂ ಇಲ್ಲ. ನನಗಾಗಿ ದೇವರೇ ಈ ಕೈಗಳನ್ನು ಕಳಿಸಿದ್ದಾನೆ’ ಎಂದು ಅರ್ಪಿತಾಭಾವುಕರಾಗಿ ಬರೆದಿದ್ದಾರೆ. ‘ಸದಾ ಪ್ರೀತಿಯ ಧಾರೆಯನ್ನೇ ಹರಿಸುವ ಸಹೋದರ ಸಲ್ಮಾನ್‌ ಮತ್ತು ತಾಯಿಗೆ ನಾನು ಸದಾ ಋಣಿ’ ಎಂದು ಹೇಳಿಕೊಂಡಿದ್ದಾರೆ.

ಅರ್ಪಿತಾ 2014ರಲ್ಲಿ ಆಯುಷ್‌ ಶರ್ಮಾ ಅವರನ್ನು ಮದುವೆಯಾಗಿದ್ದರು. ಈಗಾಗಲೇ ದಂಪತಿಗೆ ಆಹಿಲ್‌ ಎಂಬ ಮಗನಿದ್ದಾನೆ. ‘ಡಿಸೆಂಬರ್‌ ಕೊನೆಯ ವಾರ ಅಥವಾ ಜನವರಿ ಮೊದಲ ವಾರ ಹೆರಿಗೆಯಾಗಬಹುದು ಎಂದು ವೈದ್ಯರು ಹೇಳಿದ್ದರು. ಈ ಬಾರಿ ನನ್ನ ಜನ್ಮದಿನಕ್ಕೆ ಮುದ್ದಾದ ಮಗುವನ್ನು ಉಡುಗೊರೆ ನೀಡುವಂತೆ ಸಲ್ಮಾನ್‌ ಹೇಳಿದ್ದರು. ಭಾಯ್‌ಜಾನ್‌ ಜನ್ಮದಿನವಾದ ಡಿಸೆಂಬರ್‌ 27ರಂದೇ ಆಯಾತ್‌ ಈ ಭೂಮಿಗೆ ಬಂದಳು. ಇದು ನಮ್ಮ ಮತ್ತು ಇಡೀ ಕುಟುಂಬದ ಖುಷಿಯನ್ನು ಇಮ್ಮಡಿಸಿದೆ. ಈ ಉಡುಗರೆಯಿಂದ ಎಲ್ಲಕ್ಕಿಂತ ಹೆಚ್ಚು ಖುಷಿಯಾಗಿದ್ದು ಭಾಯಿಜಾನ್‌ ಎಂದು ಬೇರೆ ಹೇಳಬೇಕಿಲ್ಲ’ ಎಂದು ಅರ್ಪಿತಾ ಗಂಡ ಆಯುಷ್‌ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.