ADVERTISEMENT

ವೆಂಕಟೇಶ್‌ ಪುತ್ರಿ ಮದುವೆಯಲ್ಲಿ ಸಲ್ಮಾನ್‌ ಬಿಂದಾಸ್‌ ಡಾನ್ಸ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 10:37 IST
Last Updated 27 ಮಾರ್ಚ್ 2019, 10:37 IST
ವಿಕ್ಟರಿ ವೆಂಕಟೇಶ್‌, ಸಲ್ಮಾನ್‌ ಖಾನ್ 
ವಿಕ್ಟರಿ ವೆಂಕಟೇಶ್‌, ಸಲ್ಮಾನ್‌ ಖಾನ್    

ಜೈಪುರದಲ್ಲಿ ನಡೆದತೆಲುಗು ನಟ ವಿಕ್ಟರಿ ವೆಂಕಟೇಶ್‌ ದಗ್ಗುಬಾಟಿ ಹಿರಿಯ ಪುತ್ರಿ ಅಶ್ರಿತಾ ವಿವಾಹಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸೇರಿದಂತೆದಕ್ಷಿಣ ಚಿತ್ರರಂಗದ ನಟರ ದಂಡು ನೆರೆದಿತ್ತು. ಮಾಧ್ಯಮವನ್ನು ದೂರ ಇಡಲಾಗಿತ್ತು. ಮದುವೆ ಸುದ್ದಿ, ಫೋಟೊ ಮಾಧ್ಯಮದವರನ್ನು ತಲುಪದಂತೆ ಎಚ್ಚರಿಕೆ ವಹಿಸಲಾಗಿತ್ತು.

ಮದುವೆಗೆ ಹಾಜರಾಗಿದ್ದ ಹಿರಿಯ ನಟಿ ಬಿನಾ ಕಕ್‌ ಅವರು ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ.

ಉತ್ತಮ ಸ್ನೇಹಿತರಾಗಿರುವಸಲ್ಮಾನ್‌ ಖಾನ್‌ ಮತ್ತು ವೆಂಕಟೇಶ್‌ ಇಬ್ಬರೂ ಸಲ್ಮಾನ್‌ ನಟಿಸಿದ ‘ಕಿಕ್‌’ಚಿತ್ರದ ‘ಜುಮ್ಮೆ ಕಿ ರಾತ್‌ ಹ..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅತಿಥಿಗಳ ಪೈಕಿ ಸಲ್ಮಾನ್‌ ಖಾನ್‌ ಪ್ರಮುಖ ಆಕರ್ಷಣೆಯಾಗಿದ್ದರು. ವೆಂಕಟೇಶ್‌ ಸಹೋದರ ಸುರೇಶ್ ದಗ್ಗುಬಾಟಿ ಪುತ್ರ ರಾನಾ ದಗ್ಗುಬಾಟಿ, ನಾಗಾರ್ಜುನ್‌ ಪುತ್ರ ನಾಗಚೈತನ್ಯ ಮತ್ತು ಪತ್ನಿ ಸಮಂತಾ ರುತ್‌ ಪ್ರಭು. ನಾಗಚೈತನ್ಯ, ವೆಂಕಟೇಶ್ ಸಹೋದರಿಯ ಪುತ್ರ.

ADVERTISEMENT

ಹೈದರಾಬಾದ್‌ ರೇಸ್‌ ಕ್ಲಬ್‌ ಅಧ್ಯಕ್ಷ ಸುರೇಂದ್ರ ರೆಡ್ಡಿ ಅವರ ಮೊಮ್ಮಗ ವಿನಾಯಕ್‌ ರೆಡ್ಡಿ ಜತೆ ಫೆಬ್ರುವರಿ 6ರಂದು ಹೈದರಾಬಾದ್‌ನಲ್ಲಿರುವ ವೆಂಕಟೇಶ್‌ ನಿವಾಸದಲ್ಲಿಅಶ್ರಿತಾ ನಿಶ್ಚಿತಾರ್ಥವಾಗಿತ್ತು. ಪಾಕ್‌ ಪ್ರವೀಣೆಯಾಗಿರುವ ಅಶ್ರಿತಾ ಅಡುಗೆಗೆ ಸಂಬಂಧಿಸಿದ ಬ್ಲಾಗ್‌ ಹೊಂದಿದ್ದು ಸಾವಿರಾರು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.