ADVERTISEMENT

ದಿನವೊಂದನ್ನು ಎದುರಿಸಲು ಕಷ್ಟವಾದಾಗ ಸರಳವಾಗಿ ಬದುಕಿಬಿಡಿ: 2022ಕ್ಕೆ ಸಮಂತಾ ಸಲಹೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2022, 10:27 IST
Last Updated 1 ಜನವರಿ 2022, 10:27 IST
ಸಮಂತಾ
ಸಮಂತಾ   

ನಟಿ ಸಮಂತಾ ಅವರುಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನುಹಂಚಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಟನಾಗ ಚೈತನ್ಯ ಜತೆಗಿನ ಮದುವೆ ಮುರಿದು ಬಿದ್ದ ನಂತರಹಲವು ವಿಚಾರಗಳನ್ನು ಸಮಂತಾ ಹಂಚಿಕೊಳ್ಳುತ್ತಲೇ ಇದ್ದಾರೆ.ಬದುಕು, ಸಂಬಂಧ, ಲೈಂಗಿಕತೆ, ಮಾನಸಿಕ ಆರೋಗ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಲೇ ಇದ್ದಾರೆ.

2022ರ ಮೊದಲ ದಿನ ಸ್ವಯಂ ಪ್ರೀತಿಯ ಕುರಿತು ಸಮಂತಾ ಮಾತನಾಡಿದ್ದಾರೆ.

ತಮ್ಮಮುದ್ದಿನ ನಾಯಿಮರಿಯ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು, ‘ದಿನವೊಂದನ್ನು ಎದುರಿಸಲು ನಿಮಗೆ ಕಷ್ಟವಾದಾಗ ಬೆಳಿಗ್ಗೆ ಎದ್ದು, ಸರಳವಾಗಿ ಬದುಕಿಬಿಡಿ. ಅದು ಸಹಸಂಭ್ರಮಾಚರಣೆ ಎಂದೇತಿಳಿಯಿರಿ’ ಎಂದು ಬರೆದಿದ್ದಾರೆ.

ADVERTISEMENT

‘ಗಾಯವೊಂದು ಮಾಯಲು ಬೇಕಿರುವ ಸಂಗತಿಗಳನ್ನುಹುಡುಕುತ್ತಲೇ ಇರಿ. ನಿಮ್ಮೊಂದಿಗೆ ನೀವುಜಾಗೂರಕರಾಗಿರಿ. ಸಣ್ಣ ಹೆಜ್ಜೆಯನ್ನು ಮುಂದಿಡುವುದು ಸಹ ನೀವು ಏನಾಗಲು ಹೊರಟಿದ್ದೀರಿಎಂಬುದನ್ನು ನಿರ್ಧರಿಸುತ್ತದೆ. ಅದನ್ನು ಮರೆಯಬೇಡಿ. ಈ ಕ್ರಿಯೆಯಲ್ಲಿನಾವು ಒಟ್ಟಿಗೆ ಇರಲಿದ್ದೇವೆ.2022...ಶಕ್ತಿ, ವಿವೇಕ ಮತ್ತುಕರುಣೆಯಿಂದ ಕೂಡಿರಲಿ’ ಎಂದು ಸಮಂತಾ ತಿಳಿಸಿದ್ದಾರೆ.

ಸಮಂತಾ ಅವರು ಇತ್ತೀಚೆಗೆ ನಟ ನಾಗಾ ಚೈತನ್ಯರಿಂದ ವಿಚ್ಛೇದನ ಪಡೆದಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.