ADVERTISEMENT

ಆಧ್ಯಾತ್ಮದ ಆಸರೆ ಬಯಸಿ ರಿಷಿಕೇಶದ ಆಶ್ರಮಕ್ಕೆ ಭೇಟಿ ನೀಡಿದ ಸಮಂತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2021, 5:59 IST
Last Updated 23 ಅಕ್ಟೋಬರ್ 2021, 5:59 IST
ಸಮಂತಾ ರುತ್‌ ಪ್ರಭು
ಸಮಂತಾ ರುತ್‌ ಪ್ರಭು    

ವಿಚ್ಛೇದನದ ನಂತರ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿರುವ ಸಮಂತಾ ರುತ್‌ ಪ್ರಭು ಅವರೀಗ ಆಧ್ಯಾತ್ಮದ ಕಡೆಗೆ ವಾಲುತ್ತಿರುವ ಲಕ್ಷಣಗಳು ಕಾಣುತ್ತಿವೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಚಿತ್ರವೊಂದು ಇದಕ್ಕೆ ಪುಷ್ಟಿ ನೀಡುತ್ತಿದೆ.

ಹೌದು, ಸಮಂತಾ ಅವರೀಗ ರಿಷಿಕೇಶದಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರ ಸ್ನೇಹಿತೆ ಹಾಗೂ ಮಾಡೆಲ್‌ ಆಗಿರುವ ಶಿಲ್ಪಾ ರೆಡ್ಡಿಯೊಂದಿಗೆ ಆಶ್ರಮವೊಂದನ್ನು ಸೇರಿದ್ದಾರೆ.

ಈ ಕುರಿತ ಚಿತ್ರವೊಂದನ್ನು ಹಂಚಿಕೊಂಡಿರುವ ಸಮಂತಾ ಅವರು ರಿಷಿಕೇಶದಲ್ಲಿರುವ ಮಹರ್ಷಿ ಯೋಗಿ ಆಶ್ರಮದಲ್ಲಿ(ಬೀಟಲ್ಸ್‌ ಆಶ್ರಮ) ಇರುವುದಾಗಿ ತಿಳಿಸಿದ್ದಾರೆ. ಆಶ್ರಮದಲ್ಲಿ ಹೇಳಿಕೊಡುವ 'ಅತೀಂದ್ರಿಯ ಧ್ಯಾನ'ದ ಕುರಿತಾಗಿಯೂ ಸಮಂತಾ ಬರೆದುಕೊಂಡಿದ್ದಾರೆ.

ADVERTISEMENT

2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಮದುವೆಯಾಗಿದ್ದರು. ಅಕ್ಟೋಬರ್‌ 2ರಂದು ವಿಚ್ಛೇದನ ಘೋಷಿಸಿದ ನಂತರ ಸಮಂತಾ ಹೆಚ್ಚು ಸುದ್ದಿಯಲ್ಲಿದ್ದಾರೆ.

ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣದ ಪ್ರೊಡಕ್ಷನ್ ನಂ: 30 ಚಿತ್ರಕ್ಕೆ ಸಮಂತಾ ಸಹಿ ಹಾಕಿದ್ದಾರೆ. ಈ ಚಿತ್ರ ಎರಡು ಭಾಷೆಗಳಲ್ಲಿ ತಯಾರಾಗಲಿದೆ. ಶಾಂತರುಬನ್ ಜ್ಞಾನಶೇಖರನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.