ನಟಿ ಸಮಂತಾ, ಜೋಸೆಫ್
ಬೆಂಗಳೂರು: ಖ್ಯಾತ ಚಿತ್ರ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು (75) ಅವರು ನಿಧನರಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಸಮಂತಾ ಕಡೆಯಿಂದ ಬಂದಿಲ್ಲವಾದರೂ ಅವರ ಇನ್‌ಸ್ಟಾಗ್ರಾಂ ಪೋಸ್ಟ್ ಆಧಾರವಾಗಿಟ್ಟುಕೊಂಡು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
‘Until we meet again dad’ ಎಂಬ ಬರಹವನ್ನು ಸಮಂತಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ.
ತಮಿಳುನಾಡಿನ ಪಲ್ಲವರಂ ಮೂಲದ ಜೋಸೆಫ್ ಪ್ರಭು ಅವರು ಬ್ರಿಟಿಷ್ ಮಹಿಳೆಯನ್ನು ಮದುವೆಯಾಗಿದ್ದರು.
ಜೋಸೆಫ್ ಅವರಿಗೆ ಸಮಂತಾ ಸೇರಿ ಮೂವರು ಮಕ್ಕಳು. ಜೋನಾಥನ್ ಪ್ರಭು ಮತ್ತು ಡೇವಿಡ್ ಪ್ರಭು ಸಮಂತಾಳ ಹಿರಿಯ ಸಹೋದರರು.
ಚಿತ್ರೋದ್ಯಮದಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಲು ನನ್ನ ತಂದೆ ಅವರೇ ಕಾರಣ ಎಂದು ಸಮಂತಾ ಹಲವಾರು ಭಾರಿ ಸಂದರ್ಶನಗಳಲ್ಲಿ ಹೇಳಿದ್ದರು. ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.