60 ವರ್ಷ ವಯಸ್ಸಾದರೂ ಚಿರ ಯುವಕನಂತೆ ಕಾಣಿಸಿಕೊಂಡ ನಟ ರಮೇಶ್ ಅರವಿಂದ್
ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್
ನಟ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಒಟ್ಟಾಗಿ ಅಭಿನಯಿಸುತ್ತಿರುವ ‘Your's Sincerely ರಾಮ್’ ಚಿತ್ರ ಸೆಟ್ಟೇರಿದೆ
ಜೀ ಕನ್ನಡ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ನಿರೂಪಣೆ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದುಕೊಂಡರು.
ಸಾಮಾಜಿಕ ಜಾಲತಾಣ, ಕಾರ್ಯಕ್ರಮಗಳು ಹಾಗೂ ಸಮಾರಂಭಗಳಲ್ಲಿ ತಮ್ಮ ಭಾಷಣ, ಸ್ಫೂರ್ತಿದಾಯಕ ಮಾತುಗಳ ಮೂಲಕ ಯುವಜನತೆಯನ್ನು ಹುರಿದುಂಬಿಸುತ್ತಾರೆ.
ನಟ ರಮೇಶ್ ಅರವಿಂದ್ ತಮ್ಮ ನಟನೆ, ಸರಳ ವ್ಯಕ್ತಿತ್ವ ಮೂಲಕ ಹೆಚ್ಚು ಮನೆಮಾತಾಗಿದ್ದಾರೆ.
ತಮ್ಮ ಹೊಸ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ನಟ ರಮೇಶ್ ಹಂಚಿಕೊಂಡಿದ್ದಾರೆ
ನಿಮಗೆ ವಯಸ್ಸೇ ಆಗಲ್ವಾ, ಬರ್ತಾ ಬರ್ತಾ ವಯಸ್ಸು ಕಡಿಮೆ ಆಗ್ತಿದೆ, ಸುರ ಸುಂದರ, ಚಿರ ಯುವಕ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ನಟನೆ, ನಿರ್ದೇಶನ, ನಿರೂಪಣೆಯಿಂದ ಹೆಚ್ಚು ಜನಪ್ರಿಯಗೊಂಡಿದ್ದಾರೆ ನಟ ರಮೇಶ್ ಅರವಿಂದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.