ಹಳ್ಳಿಯ ದ್ವೇಷ, ಸಂಘರ್ಷಗಳ ಕಥೆ ಹೊಂದಿರುವ ‘ಛೂ ಬಾಣ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಎಸ್.ಆರ್.ಪ್ರಮೋದ್ ಕಥೆ, ಸಾಹಿತ್ಯ ರಚಿಸಿ ನಿರ್ದೇಶಿಸುತ್ತಿದ್ದಾರೆ.
‘ಸಮಾಜದಲ್ಲಿ ಎಷ್ಟೋ ಸಲ ಸಣ್ಣ ಸಣ್ಣ ವಿಷಯಗಳಿಗೆ ಮನಸ್ತಾಪವಾಗಿ, ಒಂದು ಹಂತದಲ್ಲಿ ಕೊಲೆಗೆ ತಲುಪುತ್ತದೆ. ಅದೇ ರೀತಿ ಹಳ್ಳಿಯಲ್ಲಿ ನಡೆಯುವ ಕಥೆಯಿದು. ಹಳೆಯ ವೈಷಮ್ಯದಿಂದ ಅಪರಾಧಗಳು ನಡೆಯುತ್ತವೆ. ಊರಿನ ಗೌಡರ ಮನೆಯಲ್ಲಿ ಕೊಲೆಗಳು ಆಗುತ್ತಿರುತ್ತವೆ. ಅವುಗಳನ್ನು ಮಾಡೋರು ಯಾರು? ಯಾವ ಕಾರಣಕ್ಕೆ? ಎಂಬಿತ್ಯಾದಿ ವಿಷಯಗಳೇ ಚಿತ್ರಕಥೆ. ಮೈಸೂರಿನಲ್ಲಿ ಸೆಟ್ ಹಾಕಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸುವ ಯೋಜನೆಯಿದೆ. ಎರಡು ಹಾಡುಗಳು ಹಾಗೂ ಎರಡು ಫೈಟ್‌ಗಳು ಚಿತ್ರದಲ್ಲಿವೆ’ ಎಂದರು ನಿರ್ದೇಶಕರು.
ಎಸ್.ಕೆ.ಭಾಷಾ ಫಿಲ್ಮ್ಸ್ ಅಡಿಯಲ್ಲಿ ಎಸ್.ಕೆ.ಫಿರೋಜ್ ಭಾಷಾ ಬಂಡವಾಳ ಹೂಡಿದ್ದು, ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹಾಸನ ಮೂಲದ ರೇಖಾ ರಮೇಶ್ ನಾಯಕಿ. ಕೆವಿನ್.ಎಂ ಸಂಗೀತ, ಮೈಸೂರು ಸೋಮು ಛಾಯಾಚಿತ್ರಗ್ರಹಣ, ಅಯುರ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.