ADVERTISEMENT

ನಟ ಪೃಥ್ವಿ ಅಂಬಾರ್ ತಾಯಿ ನಿಧನ: ಮಂಗಳೂರಿನಲ್ಲಿ ಅಂತ್ಯಕ್ರಿಯೆ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2022, 4:49 IST
Last Updated 16 ಜುಲೈ 2022, 4:49 IST
ಪೃಥ್ವಿ ಅಂಬಾರ್‌ ಮತ್ತು ಸುಜಾತ ವೀರಪ್ಪ ಅಂಬಾರ್
ಪೃಥ್ವಿ ಅಂಬಾರ್‌ ಮತ್ತು ಸುಜಾತ ವೀರಪ್ಪ ಅಂಬಾರ್   

ಬೆಂಗಳೂರು: ಸ್ಯಾಂಡಲ್‌ವುಡ್ ಯುವ ನಟ, 'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್‌ ಅವರ ತಾಯಿ ಸುಜಾತ ವೀರಪ್ಪ ಅಂಬಾರ್ ಅವರು ಶನಿವಾರ ನಿಧನರಾಗಿದ್ದಾರೆ.

ಸುಜಾತ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳೂರಿನಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ತೆರೆಕಂಡ ‘ಬೈರಾಗಿ’, ‘ಶುಗರ್‌ ಲೆಸ್‌’ ಸಿನಿಮಾಗಳಲ್ಲಿ ಪೃಥ್ವಿ ಅಂಬಾರ್‌ ನಟಿಸಿದ್ದಾರೆ.

ADVERTISEMENT

2020ರಲ್ಲಿ ತೆರೆಕಂಡ ‘ದಿಯಾ’ ಸಿನಿಮಾ ಪೃಥ್ವಿ ಅಂಬಾರ್‌ಗೆ ಹೆಸರು ತಂದುಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.