ADVERTISEMENT

Sandalwood: ಚಿಂದಿ ಆಯುವ ಮಹಿಳೆಯ ಕಥೆ ‘ಬೀದಿ ಬದುಕು’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 23:30 IST
Last Updated 15 ಅಕ್ಟೋಬರ್ 2025, 23:30 IST
ರೇಖಾ ಸಾಗರ್‌, ಪುರುಷೋತ್ತಮ್‌, ಗಣೇಶ್‌ ರಾವ್‌
ರೇಖಾ ಸಾಗರ್‌, ಪುರುಷೋತ್ತಮ್‌, ಗಣೇಶ್‌ ರಾವ್‌   

ಹೊಟ್ಟೆಪಾಡಿಗಾಗಿ ಚಿಂದಿ ಆಯುವ ಮಹಿಳೆಯ ಕಥೆಯನ್ನು ಹೊಂದಿರುವ ‘ಬೀದಿ ಬದುಕು’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪುರುಷೋತ್ತಮ್ ಓಂಕಾರ್‌ ಚಿತ್ರದ ನಿರ್ದೇಶಕ.

‘ನಾನು ಈ ಹಿಂದೆ ಒಂದಷ್ಟು ಭಕ್ತಿ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿದ್ದೆ. ಈ ಸಲ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಕುಡುಕ ಗಂಡನ ಉಪಟಳದ ನಡುವೆ ತನ್ನ ಮಗನಿಗಾಗಿ ಕಷ್ಟಪಡುವ ತಾಯಿಯೊಬ್ಬಗಳ ಕಥೆಯಿದು. ತನ್ನ ಮಗನಿಗಾಗಿ ಆಕೆ ಏನೆಲ್ಲ ಹೋರಾಟ ಮಾಡುತ್ತಾಳೆ, ಅವಮಾನ ಅನುಭವಿಸುತ್ತಾಳೆ ಎಂಬುದೇ ಚಿತ್ರಕಥೆ. ನಿಜವಾದ ಕೊಳೆಗೇರಿ, ಗುಡಿಸಲುಗಳು, ಸ್ಮಶಾನ ಹಾಗೂ ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ್ದೇವೆ’ ಎಂದರು ನಿರ್ದೇಶಕ.

ನಟಿ ರೇಖಾ ಸಾಗರ್‌ ಚಿತ್ರದ ನಾಯಕಿಯಾಗಿದ್ದು, ಜತೆಗೆ ಬಂಡವಾಳವನ್ನೂ ಹೂಡಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರಕ್ಕೆ ರಾಜ್ ಭಾಸ್ಕರ್‌ ಸಂಗೀತ, ಮುತ್ತುರಾಜ್‌ ಛಾಯಾಚಿತ್ರಗ್ರಹಣ, ಅನಿಲ್ ಸಂಕಲನವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.