ADVERTISEMENT

ಹೆಣ್ಣುಮಕ್ಕಳು ಸೀರೆಯಲ್ಲೀ ಹೇಗಿರ್ತಾರೋ?: ʼಶಂಭೋ ಶಿವ ಶಂಕರ’ ಚಿತ್ರದ ನಟರ ಉದ್ಗಾರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 9:20 IST
Last Updated 31 ಆಗಸ್ಟ್ 2021, 9:20 IST
‘ಶಂಭೋ ಶಿವ ಶಂಕರ’ ಚಿತ್ರದ ದೃಶ್ಯ
‘ಶಂಭೋ ಶಿವ ಶಂಕರ’ ಚಿತ್ರದ ದೃಶ್ಯ   

‘ಸೀರೆಯಲ್ಲಿ ಹೆಣ್ಣು ಮಕ್ಕಳು ಹೇಗಿರುತ್ತಾರೋ ನಮಗಂತೂ ಸಾಕಾಗಿ ಹೋಗಿದೆ...’

‘ಶಂಭೋ ಶಿವ ಶಂಕರ’ ಚಿತ್ರದ ಮೂವರು ನಟರಾದರೋಹಿತ್, ರಕ್ಷಿತ್ ಮತ್ತು ಪುನೀತ್ ಅವರ ಉದ್ಗಾರ ಇದು.

ಚಿತ್ರದಲ್ಲಿ ಈ ಮೂವರು ಮಂಗಳಮುಖಿಯರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಮೂವರೂ ಸೀರೆ ತೊಟ್ಟು ಆ್ಯಕ್ಷನ್‌ ದೃಶ್ಯ ಮಾಡಬೇಕಾದ ಸಂದರ್ಭ ಇದು. ಸೀರೆ, ಭರ್ಜರಿ ಮೇಕಪ್‌ ಮಾಡಿಕೊಂಡ ಹುಡುಗರು ಶೂಟಿಂಗ್‌ ಮುಗಿದಾಗ ಮೇಲಿನಂತೆ ಉದ್ಗಾರ ತೆಗೆದರು. ‘ಕೆಲವೇ ಗಂಟೆಗಳ ಕಾಲ ಈ ಮೇಕಪ್‌ನಲ್ಲಿ ಇರುವುದೇ ಕಷ್ಟ ಹೆಣ್ಣುಮಕ್ಕಳು ಹೇಗಿರಬೇಕು’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ADVERTISEMENT

‘ಶಂಭೋ ಶಿವ ಶಂಕರ’ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ.ಚಿತ್ರೀಕರಣ ನೆಲಮಂಗಲದ ಹೊರ ವಲಯದಲ್ಲಿರುವ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಶೂಟಿಂಗ್‌ ನಡೆದಿದೆ. ವರ್ತೂರು ಮಂಜು ನಿರ್ಮಾಣ, ಶಂಕರ್ ಕೋನಮಾನಳ್ಳಿ ನಿರ್ದೇಶನ ಈ ಚಿತ್ರಕ್ಕಿದೆ.ಫೈಟ್ ಮಾಸ್ಟರ್ ಡಿಫರೆಂಟ್‌ಡ್ಯಾನಿ ಸಾಹಸ ಸಂಯೋಜನೆ ಮಾಡಿದ್ದಾರೆ. ಗೌಸ್ ಫೀರ್ ಹಾಡುಗಳನ್ನು ಬರೆದಿದ್ದಾರೆ. ಹಿತನ್ ಹಾಸನ್ ಸಂಗೀತ ನಿರ್ದೇಶನವಿದೆ. ಈ ಚಿತ್ರಕ್ಕೆ ಧರ್ಮವಿಶ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.ವೆಂಕಟೇಶ್ ಯುಡಿವಿ ಅವರ ಸಂಕಲನವಿದೆ.

ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಅವರ ಸಂಕಲನ ಈ ಚಿತ್ರಕ್ಕಿದೆ.

‘ಶಂಭೋ ಶಿವ ಶಂಕರ’ ಮೂರು ನಾಯಕ ಪಾತ್ರಗಳ ಹೆಸರು. ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಸುಪ್ರೀಂ ಹೀರೋ ಶಶಿಕುಮಾರ್, ಸೋನಲ್ ಮಾಂತೆರೊ, ಜೋಗಿ‌ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್, ಡಿ.ಸಿ.ತಮ್ಮಣ್ಣ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.