ADVERTISEMENT

ಹೊಸ ಸಿನಿಮಾ | ‘ಹೊಸ ದಿನಚರಿ’ ಡಿಸೆಂಬರ್ 9ರಂದು ತೆರೆಗೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 13:12 IST
Last Updated 1 ಡಿಸೆಂಬರ್ 2022, 13:12 IST
‘ಹೊಸ ದಿನಚರಿ’ ಚಿತ್ರತಂಡ
‘ಹೊಸ ದಿನಚರಿ’ ಚಿತ್ರತಂಡ   

ಪ್ರೀತಿಯ ನಾಲ್ಕು ಆಯಾಮಗಳನ್ನು ತೆರೆದಿಟ್ಟಿದೆ ‘ಹೊಸ ದಿನಚರಿ’.ಆದರೆ ಆ ಪ್ರೀತಿ ಕೊನೆಯ ತನಕ ಉಳಿಯುತ್ತದೆಯೇ? ಹಾಗಾದರೆ ಕೊನೆ ತನಕ ನಮ್ಮ ಜೊತೆ ಇರುವವರು ಯಾರು? ಎಂಬದೇ ‘ಹೊಸ ದಿನಚರಿ’ಯ ಕಥಾಸಾರಾಂಶ. ಸಿನಿಮಾ ಹೇಗಿದೆ ಎಂದು ತೆರೆಯಲ್ಲಿ ನೋಡಲು ಡಿಸೆಂಬರ್ 9ರವರೆಗೆ ಕಾಯಬೇಕು.

ಸಾಫ್ಟ್‌ವೇರ್ ಹಿನ್ನೆಲೆಯಿಂದ ಬಂದಿರುವ ಈ ಹುಡುಗರ ಹೊಸ ಪ್ರಯತ್ನವೇ ಈ ಚಿತ್ರ.ಶೂಲಿನ್ ಮೀಡಿಯಾ ಹೌಸ್ ಸಹಯೋಗದೊಂದಿಗೆ ಡೀಸ್ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ಗಂಗಾಧರ್ ಸಾಲಿಮಠ ಅವರು ಈ ಚಿತ್ರ ನಿರ್ಮಿಸಿದ್ದಾರೆ.ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ನಿರ್ದೇಶಕರು. ವೈಶಾಖ್‌ ವರ್ಮಾ ಅವರ ಸಂಗೀತವಿದೆ. ಅಶ್ವಿನ್‌ ಹೇಮಂತ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಕಲಾವಿದರಾದ ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ, ಮಂದಾರ,‌ ವರ್ಷ ತಾರಾಗಣದಲ್ಲಿದ್ದಾರೆ ಛಾಯಾಗ್ರಹಣ ರಾಕಿ ಅವರದ್ದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.