ADVERTISEMENT

Sandalwood: ತೀರ್ಥರೂಪ ತಂದೆಯವರಿಗೆ ಮೊದಲ ಹಾಡು ರಿಲೀಸ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 23:30 IST
Last Updated 29 ಸೆಪ್ಟೆಂಬರ್ 2025, 23:30 IST
   

‘ಹೊಂದಿಸಿ ಬರೆಯಿರಿ’ ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ್‌ ನಿರ್ದೇಶನದ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. 

ಶೀರ್ಷಿಕೆಯ ಮೂಲಕವೇ ಗಮನಸೆಳೆದಿರುವ ಈ ಸಿನಿಮಾದಲ್ಲಿ ತೆಲುಗು ಕಿರುತೆರೆಯಲ್ಲಿ ಹೆಸರು ಮಾಡಿರುವ ಕನ್ನಡದ ನಿಹಾರ್‌ ಮುಕೇಶ್‌ ನಾಯಕನಾಗಿ ನಟಿಸಿದ್ದಾರೆ. ಬಿಡುಗಡೆಯಾಗಿರುವ ‘ನನದೇ ಜಗದಲಿ’ ಹಾಡಿಗೆ ರಾಮೇನಹಳ್ಳಿ ಜಗನ್ನಾಥ್‌ ಅವರೇ ಸಾಹಿತ್ಯ ಬರೆದಿದ್ದಾರೆ. ಭಾವನಾತ್ಮಕವಾಗಿ ಸಾಗುವ ಈ ಹಾಡಿಗೆ ಕಪಿಲ್ ಕಪಿಲನ್‌ ದನಿಯಾಗಿದ್ದಾರೆ. ಜೋ ಕೋಸ್ಟ ಸಂಗೀತವಿರುವ ಈ ಹಾಡಿನಲ್ಲಿ ಅಮ್ಮ ಮಗನ ಬಾಂಧವ್ಯವನ್ನು ಕಟ್ಟಿಕೊಡಲಾಗಿದೆ. 

ನಿಹಾರ್ ಮುಕೇಶ್‌ಗೆ ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ ಸೇರಿದಂತೆ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿದ್ದು, ರಾಮೇನಹಳ್ಳಿ ಜಗನ್ನಾಥ್‌ ಅವರೇ ಕಥೆ ಬರೆದಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ದೀಪಕ್ ಯರಗೇರಾ ಛಾಯಾಚಿತ್ರಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ ಚಿತ್ರಕ್ಕಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.