ADVERTISEMENT

ದುಬೈನಿಂದ ಗೋಲ್ಡನ್ ವೀಸಾ ಪಡೆದ ನಟ ಸಂಜಯ್ ದತ್

ಪಿಟಿಐ
Published 26 ಮೇ 2021, 15:31 IST
Last Updated 26 ಮೇ 2021, 15:31 IST
ಸಂಜಯ್ ದತ್ ಟ್ವಿಟರ್ ಖಾತೆಯ ಸ್ಕ್ರೀನ್ ಗ್ರ್ಯಾಬ್
ಸಂಜಯ್ ದತ್ ಟ್ವಿಟರ್ ಖಾತೆಯ ಸ್ಕ್ರೀನ್ ಗ್ರ್ಯಾಬ್   

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ನ ಗೋಲ್ಡನ್ ವೀಸಾ ದೊರೆತಿದೆ ಎಂದು ಬಾಲಿವುಡ್ ನಟ ಸಂಜಯ್ ದತ್ ಬುಧವಾರ ಹೇಳಿದ್ದಾರೆ.

61 ವರ್ಷದ ನಟ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ.

‘ಮೇಜರ್ ಜನರಲ್ ಮೊಹಮ್ಮದ್ ಅಲ್ ಮಾರಿ ಅವರ ಸಮ್ಮುಖದಲ್ಲಿ ಯುಎಇ ಗೋಲ್ಡನ್ ವೀಸಾ ಪಡೆದಿದ್ದು ಅತ್ಯಂತ ಗೌರವದ ಸಂಗತಿಯಾಗಿದೆ. ಈ ಗೌರವಕ್ಕಾಗಿ ಯುಎಇ ಸರ್ಕಾರ ಮತ್ತು ಫ್ಲೈ ದುಬೈನ ಸಿಒಒ ಹಮದ್ ಒಬೈದಲ್ಲಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಚಿತ್ರಗಳೊಂದಿಗೆ ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಕಳೆದ ವರ್ಷ, ನಟಿ ಮತ್ತು ನಿರ್ಮಾಪಕಿಯೂ ಆಗಿರುವ ಸಂಜಯ್ ದತ್ ಪತ್ನಿ ಮಾನ್ಯತಾ ತಮ್ಮ ಅವಳಿ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ (10) ಅವರೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದರು. ಸದ್ಯ, ಅವರು ಅಲ್ಲಿಯೇ ವಾಸವಾಗಿದ್ದಾರೆ.

ಖಲೀಜ್ ಟೈಮ್ಸ್ ಪ್ರಕಾರ, ಯುಎಇ ಸರ್ಕಾರವು 2019 ರಲ್ಲಿ ದೀರ್ಘಾವಧಿಯ ವೀಸಾಗಳಿಗಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ವಿದೇಶಿಗರು ತಮ್ಮ ದೇಶದ ಪ್ರಾಯೋಜಕತ್ವದ ಅಗತ್ಯವಿಲ್ಲದೆ ಯುಎಇಯಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅನುವು ಮಾಡಿಕೊಟ್ಟಿತು. ಈ ಗೋಲ್ಡನ್ ವೀಸಾಗಳನ್ನು ಐದು ಅಥವಾ 10 ವರ್ಷಗಳವರೆಗೆ ನೀಡಲಾಗುತ್ತದೆ. ಬಳಿಕ, ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.