ADVERTISEMENT

Movies Update: ಸಂಕ್ರಾಂತಿಗಿಲ್ಲ ಕನ್ನಡ ಸಿನಿಮಾ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 23:30 IST
Last Updated 8 ಜನವರಿ 2026, 23:30 IST
<div class="paragraphs"><p>ವಿಜಯ್‌</p></div>

ವಿಜಯ್‌

   

ಈ ವರ್ಷದ ಸಂಕ್ರಾಂತಿಗೆ ಪರಭಾಷಾ ಸಿನಿಮಾಗಳೇ ತೆರೆತುಂಬಿಕೊಳ್ಳಲಿವೆ. ಜ.15ರಂದು ತೆರೆಕಾಣಬೇಕಿದ್ದ ನಟ ಸುದೀಪ್‌ ಅಕ್ಕನ ಮಗ ಸಂಚಿತ್‌ ನಟನೆಯ ‘ಮ್ಯಾಂಗೋ ಪಚ್ಚ’ ಮುಂದೂಡಿಕೆಯಾಗಿದೆ.

ಜ.9ರಂದು ಪ್ರಭಾಸ್ ನಟನೆಯ ತೆಲುಗು ಸಿನಿಮಾ ‘ದಿ ರಾಜಾಸಾಬ್‌’ ಹಾಗೂ ಜ.10ರಂದು ಶಿವಕಾರ್ತಿಕೇಯನ್‌ ನಟನೆಯ ‘ಪರಾಶಕ್ತಿ’ ರಿಲೀಸ್‌ ಆಗುತ್ತಿದೆ.

ADVERTISEMENT

‘ಜನ ನಾಯಗನ್‌’ ಮುಂದಕ್ಕೆ

ಜ.9ರಂದು ತೆರೆಕಾಣಬೇಕಿದ್ದ ವಿಜಯ್‌ ನಟನೆಯ ತಮಿಳು ಸಿನಿಮಾ ‘ಜನ ನಾಯಗನ್‌’ ಕೊನೇ ಕ್ಷಣದಲ್ಲಿ ಮುಂದೂಡಿಕೆಯಾಗಿದೆ. 

ಸಿನಿಮಾಗೆ ಯುಎ 16+ ವಿಭಾಗದಡಿಯಲ್ಲಿ ಸೆನ್ಸಾರ್‌ ಪ್ರಮಾಣಪತ್ರ ಕೋರಿ ‘ಜನ ನಾಯಗನ್‌’ ಚಿತ್ರತಂಡ ಮದ್ರಾಸ್‌ ಹೈಕೋರ್ಟ್‌ ಮೆಟ್ಟಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಸಿನಿಮಾವನ್ನು ಮುಂದೂಡಲಾಗಿದೆ ಎಂದು ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್‌ ಪ್ರೊಡಕ್ಷನ್ಸ್‌ ತಿಳಿಸಿದೆ. ಶೀಘ್ರದಲ್ಲೇ ಬಿಡುಗಡೆಯ ಹೊಸ ದಿನಾಂಕವನ್ನು ಘೋಷಿಸಲಾಗುವುದು ಎಂದೂ ಸಂಸ್ಥೆಯು ಹೇಳಿದೆ.

ಸಿನಿಮಾಗಾಗಿ ಕೆವಿಎನ್‌ ಪ್ರೊಡಕ್ಷನ್ಸ್‌ ₹500 ಕೋಟಿ ಹೂಡಿದೆ. ಇದು ವಿಜಯ್‌ ನಟನೆಯ ಕೊನೆಯ ಸಿನಿಮಾವಾಗಿದ್ದು, ಮುಂಬರುವ ಮಾರ್ಚ್‌–ಏಪ್ರಿಲ್‌ನಲ್ಲಿ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ತಮ್ಮ ‘ಟಿವಿಕೆ’ ಪಕ್ಷದಿಂದ ಸ್ಪರ್ಧಿಸಲಿದ್ದಾರೆ.  

ಪರಾಶಕ್ತಿಯಲ್ಲಿ ಧನಂಜಯ

ಖ್ಯಾತ ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನದ ‘ಪರಾಶಕ್ತಿ’ ಸಿನಿಮಾದಲ್ಲಿ ಕನ್ನಡದ ಇಬ್ಬರು ಕಲಾವಿದರು ಇದ್ದಾರೆ. ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದು, ಅತಿಥಿ ಪಾತ್ರದಲ್ಲಿ  ಧನಂಜಯ ಕಾಣಿಸಿಕೊಳ್ಳಲಿದ್ದಾರೆ. ‘ಸುಧಾ ಅವರ ಸಿನಿಮಾಗಳ ದೊಡ್ಡ ಫ್ಯಾನ್‌ ನಾನು. ನನ್ನ ಪಾತ್ರ ಸಣ್ಣದಾಗಿ ಇರಬಹುದು, ಆದರೆ ಅದಕ್ಕೆ ಮಹತ್ವವಿದೆ’ ಎಂದಿದ್ದಾರೆ ಧನಂಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.