ADVERTISEMENT

ಲಂಡನ್‌ ವಿಮಾನ ನಿಲ್ದಾಣದಲ್ಲಿ ನಟ ಸತೀಶ್ ಶಾಗೆ ಜನಾಂಗೀಯ ನಿಂದನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 13:16 IST
Last Updated 4 ಜನವರಿ 2023, 13:16 IST
ನಟ ಸತೀಶ್ ಶಾ (ಟ್ವಟರ್‌ ಚಿತ್ರ)
ನಟ ಸತೀಶ್ ಶಾ (ಟ್ವಟರ್‌ ಚಿತ್ರ)   

ಮುಂಬೈ (ಪಿಟಿಐ): ಲಂಡನ್‌ನ ಹೀಥ್ರೂ ವಿಮಾನನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬರು ತಮ್ಮ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಹಿರಿಯ ನಟ ಸತೀಶ್ ಶಾ ಹೇಳಿದ್ದಾರೆ.

ವಿಮಾನ ನಿಲ್ದಾಣದ ಸಿಬ್ಬಂದಿ ತನ್ನ ಸಹೋದ್ಯೋಗಿಯನ್ನು ಶಾ ಪ್ರಥಮ ದರ್ಜೆ ಪ್ರಯಾಣವನ್ನು ಹೇಗೆ ಪಡೆಯಲು ಸಾಧ್ಯವಾಯಿತು ಎಂದು ದಿಗ್ಭ್ರಮೆಗೊಳಿಸುವ ಧ್ವನಿಯಲ್ಲಿ ಕೇಳಿದರು ಎಂದು ಮಂಗಳವಾರ ಹೇಳಿದ್ದಾರೆ.

‘ಹೀಥ್ರೂ ಸಿಬ್ಬಂದಿ ತನ್ನ ಸಹೋದ್ಯೋಗಿಯನ್ನು ಮೊದಲ ದರ್ಜೆ ಪ್ರಯಾಣ ಟಿಕೆಟ್‌ ಹೇಗೆ ಖರೀದಿಸಬಹುದು ಎಂದು ಆಶ್ಚರ್ಯದಿಂದ ಕೇಳುವುದನ್ನು ಕೇಳಿಸಿಕೊಂಡ ನಂತರ ನಾನು ನಗುವಿನೊಂಧಿಗೆ ‘ಏಕೆಂದರೆ ನಾವು ಭಾರತೀಯರು' ಎಂದು ಉತ್ತರಿಸಿದೆ ಎಂದು ಶಾ ಟ್ವೀಟ್ ಮಾಡಿದ್ದಾರೆ.

ADVERTISEMENT

ಹೀಥ್ರೂ ವಿಮಾನನಿಲ್ದಾಣ ಈ ಕುರಿತು ಟ್ವಿಟರ್‌ನಲ್ಲಿ ಶಾ ಅವರ ಕ್ಷಮೆಯಾಚಿಸಿದ್ದು, ಘಟನೆ ಬಗ್ಗೆ ಮಾಹಿತಿ ನೀಡುವಂತೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.