ವಾಷಿಂಗ್ಟನ್: ಅಮೆರಿಕದ ಖ್ಯಾತ ಗಾಯಕಿ ಮತ್ತು ನಟಿ ಸಲೆನಾ ಗೊಮೆಜ್ ಅವರು ಖ್ಯಾತ ಗೀತರಚನೆಕಾರ ಬೆನ್ನಿ ಬ್ಲಾಂಕೊ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ವಿವಾಹವಾಗಿದ್ದಾರೆ.
ವಿವಾಹ ಸಮಾರಂಭದ ಫೋಟೊ ಮತ್ತು ವಿಡಿಯೊಗಳನ್ನು ಸೆಲೆನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
2015ರಲ್ಲಿ ಬಿಡುಗಡೆಯಾದ ‘ರಿವೈವಲ್’ ಆಲ್ಬಂನಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು. ಅದಾದ ಬಳಿಕ 2019ರಲ್ಲಿಯೂ ಜೊತೆಯಾಗಿದ್ದರು. 2023ರಲ್ಲಿ ಬಿಡುಗಡೆಯಾದ ಸೆಲೆನಾ ಅವರ ‘ಸಿಂಗಲ್ ಸೂನ್’ ಹಾಡನ್ನು ಬೆನ್ನಿ ನಿರ್ಮಿಸಿದ್ದರು. 2024ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮದುವೆಗೂ ಮುನ್ನ ಇದೇ ವರ್ಷ ಮಾರ್ಚ್‌ನಲ್ಲಿ ‘ಐ ಸೆಡ್ ಲವ್ ಯು ಫಸ್ಟ್’ ಎಂಬ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದರು.
ಸೆಲೆನಾ ಮತ್ತು ಖ್ಯಾತ ಗಾಯಕ ಜಸ್ಟಿನ್ ಬಿಬರ್ ಅವರ ನಡುವಿನ ಪ್ರೇಮ ವೈಫಲ್ಯ ಪಾಪ್ ಲೋಕದಲ್ಲಿ ಭಾರಿ ಸುದ್ದಿಯಾಗಿತ್ತು. 2018ರಲ್ಲಿ ರೂಪದರ್ಶಿ ಹೈಲಿ ಅವರೊಂದಿಗೆ ಜಸ್ಟಿನ್ ವಿವಾಹವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.