
ನವದೆಹಲಿ: ಬಾಲಿವುಡ್ ನಟ ಶಾರುಕ್ ಖಾನ್ ಅವರಿಗೆ 60ನೇ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಸಂಸದ ಶಶಿ ತರೂರ್, ಅವರ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
‘ಶಾರುಕ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ 60 ತುಂಬಿದೆ ಎಂಬುವುದರ ಬಗ್ಗೆ ನನಗೆ ಅನುಮಾನಗಳಿಗೆ. ನಾನಷ್ಟೆ ಅಲ್ಲ ಸತ್ಯಶೋಧಕರು, ವಿಧಿವಿಜ್ಞಾನ ತಜ್ಞರು ಕೂಡ ಈ ಕುರಿತು ತನಿಖೆ ನಡೆಸಿದ್ದು, ನಿಮಗೆ 60 ವರ್ಷ ತುಂಬಿದೆ ಎಂಬುವುದನ್ನು ವಾಸ್ತವಿಕವಾಗಿ ದೃಢೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ’ ಎಂದು ಶಾರುಕ್ ಕಾಲೆಳೆದಿದ್ದಾರೆ.
‘ದಿನ ಕಳೆದಂತೆ ನಿಮ್ಮ ವಯಸ್ಸು ಹಿಮ್ಮುಖವಾಗಿ ಚಲಿಸುತ್ತಿದೆ. ನಿಮ್ಮನ್ನು ಕಂಡರೆ ಹಾಲಿವುಡ್ ಸೂಪರ್ ಹಿಟ್ ಸಿನೆಮಾ ‘ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್’ ಸಿನಿಮಾದ ಬಾಲಿವುಡ್ ಅವತರಿಣಿಕೆಯಂತೆ ಕಾಣುತ್ತದೆ. ನಿಜಕ್ಕೂ ನಿಮಗೆ ಅರವತ್ತಾಗಿದೆ ಎಂದು ಹೇಳುವುದು ಕಷ್ಟ’ ಎಂದಿದ್ದಾರೆ.
‘ನಾನು 70ನೇ ವಯಸ್ಸಿಗೆ ಬಂದಾಗ, ಶಾರುಕ್ ಅವರು ಯುವಕನ ಪಾತ್ರಕ್ಕೆ ಆಡಿಷನ್ ಕೊಡಬಹುದು. ಬಾಲನಟನ ಪಾತ್ರ ಮಾಡುವಾಗ ನಾನು ಭೂಮಿ ಮೇಲೆ ಇರುವುದು ಕಷ್ಟ’ ಎಂದು ನಗೆ ಚಟಾಕಿ ಹಾರಿಸಿದ್ದಾರೆ.
ಬ್ರ್ಯಾಡ್ ಪಿಟ್ ನಟನೆಯ ‘ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್’ ಸಿನಿಮಾದಲ್ಲಿ ಕಥಾ ನಾಯಕನು ವೃದ್ಧಾಪ್ಯದಿಂದ ಯುವಕನಾಗಿ ಕೊನೆಗೆ ಮಗುವಾಗಿ ಬದಲಾಗುತ್ತಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.