ADVERTISEMENT

ಕೊನೆಗೂ ಶಾರುಕ್‌ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು ಖುಷಿ ತಂದಿದೆ: ಅನುಪಮ್‌ ಖೇರ್‌

ಪಿಟಿಐ
Published 26 ಸೆಪ್ಟೆಂಬರ್ 2025, 9:39 IST
Last Updated 26 ಸೆಪ್ಟೆಂಬರ್ 2025, 9:39 IST
   

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್‌ ಅವರ ಅಭಿನಯಕ್ಕೆ ಕೊನೆಗೂ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು ಖುಷಿ ತಂದಿದೆ ಎಂದು ನಟ ಅನುಪಮ್‌ ಖೇರ್‌ ಹೇಳಿದ್ದಾರೆ.

ಬುಧವಾರ ಜರುಗಿದ 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಶಾರುಕ್‌ ಖಾನ್‌ ಅವರಿಗೆ ಜವಾನ್‌ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.

‘ಸ್ವದೇಶ್‌ ಸಿನಿಮಾದ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು. ಅವರ ಹಲವು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಬೇಕಿತ್ತು. 40 ವರ್ಷಗಳ ಸಿನಿ ಪಯಣದಲ್ಲಿ ಶಾರುಕ್‌ ಖಾನ್‌ಗೆ ಕೊನೆಗೂ ರಾಷ್ಟ್ರ ಪ್ರಶಸ್ತಿ ಬಂದಿದ್ದು ಖುಷಿ ತಂದಿದೆ ಎಂದು ಶಾರುಕ್‌ ಜೊತೆ ಅಭಿನಯಿಸಿದ್ದ ಅನುಪಮ್‌ ಖೇರ್‌ ತಿಳಿಸಿದ್ದಾರೆ.

ADVERTISEMENT

ಜವಾನ್‌ನಂತಹ ಮುಖ್ಯ ಭೂಮಿಕೆಯ ಸಿನಿಮಾಗಳಿಗೂ ರಾಷ್ಟ್ರ ಪ್ರಶಸ್ತಿ ಬಂದಿರುವುದು ಉತ್ತಮ ಬೆಳವಣಿಗೆ. ಕರಣ್‌ ಜೋಹಾರ್‌, ರಾಣಿ ಮುಖರ್ಜಿ ಹಾಗೂ ಶಾರುಕ್‌ ಖಾನ್‌ ಅವರಂತಹ ಕಲಾವಿದರಿಗೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಈ ಬಾರಿಯ ರಾಷ್ಟ್ರ ಪ್ರಶಸ್ತಿಯ ವಿಶೇಷ ಎಂದು ಹೇಳಿದ್ದಾರೆ.

ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಶಾರುಕ್‌ ಖಾನ್‌ ಅವರು ‘12th ಫೇಲ್‌’ ಸಿನಿಮಾದ ನಾಯಕ ವಿಕ್ರಾಂತ್‌ ಮಾಸ್ಸಿ ಅವರೊಂದಿಗೆ ಹಂಚಿಕೊಂಡಿದ್ದರು.

ಇದೇ ವೇಳೆ ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ವಿಜೇತ ಮಲಯಾಳ ನಟ ಮೋಹನ್‌ಲಾಲ್‌ ಅವರಿಗೂ ಅನುಪಮ್‌ ಖೇರ್‌ ಅಭಿನಂದನೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.