ADVERTISEMENT

ಬಿಡುಗಡೆಗೊಂಡ ಮೊದಲ ದಿನ ₹30 ಕೋಟಿ ಗಳಿಸಿದ ಶಾರುಕ್ ಅಭಿನಯದ ‘ಡಂಕಿ’

ಪಿಟಿಐ
Published 23 ಡಿಸೆಂಬರ್ 2023, 8:31 IST
Last Updated 23 ಡಿಸೆಂಬರ್ 2023, 8:31 IST
‘ಡಂಕಿ’ ಚಿತ್ರದ ಪೋಸ್ಟರ್
‘ಡಂಕಿ’ ಚಿತ್ರದ ಪೋಸ್ಟರ್   

ಮುಂಬೈ: ಬಾಲಿವುಡ್ ನಟ ಶಾರುಕ್ ಖಾನ್‌ ನಟಿಸಿರುವ ಡಂಕಿ ಸಿನಿಮಾ, ಬಿಡುಗಡೆಗೊಂಡ ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ₹30 ಕೋಟಿಯಷ್ಟು ಗಳಿಸಿದೆ ಎಂದು ಸ್ಯಾಕ್‌ನಿಲ್ಕ್‌ (ಇಂಡಸ್ಟ್ರಿ ಟ್ರ್ಯಾಕರ್‌) ತಿಳಿಸಿದೆ.

ಗುರುವಾರ ಶಾರುಕ್ ಅಭಿನಯದ ‘ಡಂಕಿ’ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು. ಸಿನಿಮಾದಲ್ಲಿ ತಾಪ್ಸಿ ಪನ್ನು, ವಿಕ್ರಂ ಕೊಚ್ಚರ್, ಅನಿಲ್‌ ಗ್ರೋವರ್‌, ವಿಕ್ಕಿ ಕೌಶಲ್, ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ವರ್ಷ (2023) ಬಿಡುಗಡೆಗೊಂಡ ಶಾರುಖ್‌ ಅವರ ಮೂರನೇ ಚಿತ್ರ ಇದಾಗಿದೆ. ಶಾರುಕ್ ಅವರ ಪಠಾಣ್‌ ಮತ್ತು ಜವಾನ್‌ ಚಿತ್ರಗಳಿಗೆ ಹೋಲಿಸಿದರೆ ‘ಡಂಕಿ’ ಚಿತ್ರದ ಗಳಿಕೆಯಲ್ಲಿ ಇಳಿಕೆ ಕಂಡಿದೆ.

ADVERTISEMENT

ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್‌ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್‌ ಅಡಿಯಲ್ಲಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ಈ ಚಿತ್ರ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.