ADVERTISEMENT

’ಶಾಕುಂತಲಂ’ ಚಿತ್ರ ಬಿಡುಗಡೆ ದಿನಾಂಕ ಬದಲಾವಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2023, 8:24 IST
Last Updated 11 ಫೆಬ್ರುವರಿ 2023, 8:24 IST
ಶಾಕುಂತಲಂ ಚಿತ್ರದ ಪೋಸ್ಟರ್‌
ಶಾಕುಂತಲಂ ಚಿತ್ರದ ಪೋಸ್ಟರ್‌   

ಹೈದರಾಬಾದ್: ಟಾಲಿವುಡ್‌ ಬ್ಯೂಟಿ ಸಮಂತಾ ರುತ್ ಪ್ರಭು ಅಭಿನಯಿಸಿರುವ ಚಿತ್ರ ’ಶಾಕುಂತಲಂ’ನ ಬಿಡುಗಡೆ ದಿನಾಂಕ ಬದಲಾವಣೆಗೊಂಡಿದೆ. ಈ ಕುರಿತು ಚಿತ್ರತಂಡ ಇನ್‌ಸ್ಟಾಗ್ರಾಮ್‌ ಮೂಲಕ ಮಾಹಿತಿ ಹಂಚಿಕೊಂಡಿದೆ.

ಈ ಹಿಂದೆ ಇದೇ ಫೆಬ್ರುವರಿ 17ರಂದು ’ಶಾಕುಂತಲಂ’ ಸಿನಿಮಾ ತೆರೆ ಮೇಲೆ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಚಿತ್ರತಂಡ ಏಪ್ರಿಲ್ 14ರಂದು ‘ಶಾಕುಂತಲಂ’ ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಶಾಕುಂತಲಂ ಸಿನಿಮಾದ ಚಿತ್ರಗಳನ್ನು ಆಗಾಗ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಿನಿಮಾ ಕುರಿತ ಅಪ್‌ಡೇಟ್‌ಗಳನ್ನು ತಮ್ಮ ಅಭಿಮಾನಿಗಳಿಗೆ ಸಮಂತಾ ನೀಡುತ್ತಿರುತ್ತಾರೆ.

ADVERTISEMENT

ಪೌರಾಣಿಕ ಹಿನ್ನಲೆ ಹೊಂದಿರುವ ಶಾಕುಂತಲಂ ಚಿತ್ರದಲ್ಲಿ ನಟಿಸಿರುವ ಸಮಂತಾ, ಶ್ವೇತವರ್ಣದ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಈ ಹಿಂದಿನ ಪೋಟೊಗಳಲ್ಲಿ ನಟಿ ಹೂವಿನ ಆಭರಣಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.