ADVERTISEMENT

ಶಿವಣ್ಣ ‘ಸಂತ’, ಉಪೇಂದ್ರ ‘ನಾಗರಹಾವು’ ಖ್ಯಾತಿಯ ನಿರ್ದೇಶಕ ಮುರಳಿ ಮೋಹನ್ ನಿಧನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:55 IST
Last Updated 14 ಆಗಸ್ಟ್ 2025, 5:55 IST
<div class="paragraphs"><p>ಮುರಳಿ ಮೋಹನ್</p></div>

ಮುರಳಿ ಮೋಹನ್

   

ಬೆಂಗಳೂರು: ಚಲನಚಿತ್ರ ನಿರ್ದೇಶಕ, ಸಂಭಾಷಣೆಕಾರ ಎಸ್‌. ಮುರಳಿ ಮೋಹನ್‌ (57) ಬುಧವಾರ ನಿಧನರಾದರು. ಕೋಲಾರ ಜಿಲ್ಲೆಯ ಕೆಜಿಎಫ್‌ನವರಾದ ಇವರು ಬೆಂಗಳೂರಿನಲ್ಲಿ
ನೆಲಸಿದ್ದರು.

ಮೂತ್ರಪಿಂಡ (ಕಿಡ್ನಿ) ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಜೆ.ಸಿ. ರಸ್ತೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಶಿವರಾಜ್‌ಕುಮಾರ್ ಅಭಿನಯದ ‘ಸಂತ’, ರವಿಚಂದ್ರನ್ ನಟನೆಯ ‘ಮಲ್ಲಿಕಾರ್ಜುನ’, ಉಪೇಂದ್ರ ಅಭಿನಯದ ‘ನಾಗರಹಾವು’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಅವರಿಗೆ ಸಹೋದರ, ಸಹೋದರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.