ADVERTISEMENT

ನಟ ರಮೇಶ್ ಅರವಿಂದ್‌ಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 10:39 IST
Last Updated 24 ಸೆಪ್ಟೆಂಬರ್ 2022, 10:39 IST
ರಮೇಶ್ ಅರವಿಂದ್‌
ರಮೇಶ್ ಅರವಿಂದ್‌   

ಕೋಟ(ಬ್ರಹ್ಮಾವರ):ಕೋಟತಟ್ಟುಗ್ರಾಮಪಂಚಾಯಿತಿ, ಕೋಟಡಾ.ಕಾರಂತಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಹಭಾಗಿತ್ವದಲ್ಲಿಕೊಡಮಾಡುವ ಕೋಟಶಿವರಾಮಕಾರಂತ ಹುಟ್ಟೂರ ಪ್ರಶಸ್ತಿಗೆ ನಟ ಹಾಗೂ ನಿರ್ದೇಶಕ ಡಾ.ರಮೇಶ್ಅರವಿಂದ್ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಅ.10ರಂದು ಕೋಟಶಿವರಾಮಕಾರಂತರಜನ್ಮದಿನದಂದು ಪ್ರಶಸ್ತಿಪ್ರದಾನಮಾಡಲಾಗುವುದು‌.

ಹಿಂದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಾದ ವೀರಪ್ಪಮೊಯ್ಲಿ, ಎಂ.ಎನ್‌.ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ,ರವಿಬೆಳಗೆರೆ, ಗಿರೀಶಕಾಸರವಳ್ಳಿ,ಬಿ.ಜಯಶ್ರೀ, ಡಾ.ಮೋಹನ ಆಳ್ವ,ಸಾಲುಮರದತಿಮ್ಮಕ್ಕ, ಚಿಟ್ಟಾಣಿ, ರಾಮಚಂದ್ರಹೆಗಡೆ,ಜಯಂತ ಕಾಯ್ಕಿಣಿ, ಸದಾನಂದಸುವರ್ಣ,ಡಾ.ಬಿ.ಎಂ.ಹೆಗ್ಡೆ,ಪ್ರಕಾಶ್ರೈ,ಶ್ರೀಪಡ್ರೆ,ಕವಿತಾ
ಮಿಶ್ರಾ, ಡಾ.ಎಸ್.ಎಲ್.ಭೈರಪ್ಪ,ಗಿರೀಶ್ಭಾರಧ್ವಾಜ್ಅವರಿಗೆಪ್ರಶಸ್ತಿ ಪ್ರದಾನಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೋಟತಟ್ಟುಗ್ರಾಮಪಂಚಾಯಿತಿ ಅಧ್ಯಕ್ಷೆಅಶ್ವಿನಿದಿನೇಶ್,ಆಯ್ಕೆ ಸಮಿತಿ ಸದಸ್ಯಯು.ಎಸ್.ಶೆಣೈ,ಕನ್ನಡ ಮತ್ತುಸಂಸ್ಕೃತಿಇಲಾಖೆಸಹಾಯಕನಿರ್ದೇಶಕಿಪೂರ್ಣಿಮಾ,ಕೋಟತಟ್ಟು ಗ್ರಾಮಪಂಚಾಯಿತಿ ಉಪಾಧ್ಯಕ್ಷವಾಸುಪೂಜಾರಿ,ಪಿಡಿಒ ಜಯರಾಮ್ಶೆಟ್ಟಿ,ಪ್ರತಿಷ್ಠಾನದಪ್ರಧಾನಕಾರ್ಯದರ್ಶಿನರೇಂದ್ರಕುಮಾರ್ಕೋಟಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.