ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ‘45’ ಸಿನಿಮಾ ಡಿ.25ರಂದು ತೆರೆಕಾಣಲಿದೆ.
ಈ ಹಿಂದೆ ಆ.15ರಂದು ಸಿನಿಮಾ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರ್ಜುನ್ ಜನ್ಯ, ‘ಚಿತ್ರದಲ್ಲಿ ವಿಎಫ್‌ಎಕ್ಸ್ ಹೆಚ್ಚು ಇದೆ. ಇದರ ಕೆಲಸಗಳು ಶೇ 70ರಷ್ಟು ಪೂರ್ಣಗೊಂಡಿದ್ದು, ಈ ಕೆಲಸಗಳು ಪೂರ್ಣಗೊಳ್ಳಲು ಇನ್ನೂ ಎರಡು ತಿಂಗಳು ಬೇಕು. ಹೆಚ್ಚಿನ ವಿಎಫ್‌ಎಕ್ಸ್ ಕೆಲಸವನ್ನು ಕೆನಡಾದ ‘ಮಾರ್ಜ್’ ಕಂಪನಿಗೆ ನೀಡಲಾಗಿದೆ. ಡಿ.25ಕ್ಕೆ ಖಂಡಿತವಾಗಿಯೂ ಬರುತ್ತೇವೆ. ಈ ಸಿನಿಮಾಗೆ ಶಿವರಾಜ್‌ಕುಮಾರ್ ಶಕ್ತಿಯಾಗಿ ನಿಂತಿದ್ದಾರೆ’ ಎಂದರು.
‘ಮಾರ್ಜ್’ ಕಂಪನಿ ವಿಎಫ್‌ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಚಿತ್ರ ಇದಾಗಿದ್ದು, ಭಾರತದಲ್ಲೇ ಅತೀ ಹೆಚ್ಚು ಸಿಜಿ ಅಳವಡಿಸಲಾಗುತ್ತಿರುವ ಮೊದಲ ಚಿತ್ರ ಇದಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.