ADVERTISEMENT

ತರ್ಲೆ ಬಾಕ್ಸ್‌ನಿಂದ ಕನ್ನಡ ಹಾಸ್ಯ ಕಿರುಚಿತ್ರ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 10:41 IST
Last Updated 23 ಆಗಸ್ಟ್ 2022, 10:41 IST
ತರ್ಲೆ ಬಾಕ್ಸ್‌ ಕಿರುಚಿತ್ರ ಸ್ಪರ್ಧೆ
ತರ್ಲೆ ಬಾಕ್ಸ್‌ ಕಿರುಚಿತ್ರ ಸ್ಪರ್ಧೆ   

ಬೆಂಗಳೂರು: ತರ್ಲೆ ಬಾಕ್ಸ್‌ ಯೂಟ್ಯೂಬ್‌ ಚಾನೆಲ್‌, ಕನ್ನಡ ಹಾಸ್ಯ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ವಿಜೇತರಿಗೆ ₹1 ಲಕ್ಷ ನಗದು ಬಹುಮಾನವಿರಲಿದೆ.

ಯೂಟ್ಯೂಬ್‌ನಲ್ಲಿ 5.40 ಲಕ್ಷ ಚಂದಾದಾರರನ್ನು ಹೊಂದಿರುವ ತರ್ಲೆ ಬಾಕ್ಸ್‌, ಸ್ಟ್ಯಾಂಡ್ ಅಪ್ ಕಾಮಿಡಿ, ವೆಬ್‌ ಸರಣಿ, ಸಂದರ್ಶನ, ಕಿರು ಹಾಸ್ಯ ಚಿತ್ರಗಳಿಗೆ ಖ್ಯಾತಿ ಪಡೆದಿದೆ. ಇದೀಗ ಕಿರುಚಿತ್ರ ಸ್ಪರ್ಧೆಯ ರೂಪದಲ್ಲಿ ಎಲ್ಲ ಕಲಾವಿದರಿಗೆ ಒಂದು ವೇದಿಕೆಯನ್ನು ಒದಗಿಸಲು ತರ್ಲೆ ಬಾಕ್ಸ್‌ ನಿರ್ಧರಿಸಿದೆ. ಈ ಸ್ಪರ್ಧೆಯು ‘ಗೂಗ್ಲಿ’ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್‌ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯ ಪ್ರಕಾಶ್ ಅವರ ಬೆಂಬಲದೊಂದಿಗೆ ನಡೆಯಲಿದೆ.

ಈ ಸ್ಪರ್ಧೆಯು ಹಾಸ್ಯ ಕಿರುಚಿತ್ರಗಳಿಗಾಗಿದ್ದು, ಚಿತ್ರವನ್ನು ಪ್ರತ್ಯೇಕವಾಗಿ ಸ್ಪರ್ಧೆಗಾಗಿಯೇ ನಿರ್ಮಾಣ ಮಾಡಿರಬೇಕು. ಚಿತ್ರವನ್ನು ಗೂಗಲ್ ಫಾರ್ಮ್‌ನ ಲಿಂಕ್ ಮೂಲಕ ನೋಂದಾಯಿಸಬೇಕು. ‘ಫ್ರೆಂಚ್ ಬಿರಿಯಾನಿ’ ಖ್ಯಾತಿಯ ನಿರ್ದೇಶಕಪನ್ನಗ ಭರಣ ಈ ಸ್ಪರ್ಧೆಯ ತೀರ್ಪುಗಾರರಾಗಿರಲಿದ್ದಾರೆ. ವಿಡಿಯೊ ಆಯ್ಕೆಯಾದಲ್ಲಿ ತರ್ಲೆ ಬಾಕ್ಸ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಆಗಲಿದೆ ಎಂದು ತಂಡವು ತಿಳಿಸಿದೆ. ಜೊತೆಗೆ ಉತ್ತಮ ಕಿರುಚಿತ್ರಕ್ಕೆ ₹1 ಲಕ್ಷ ನಗದು ಬಹುಮಾನ ಗೆಲ್ಲುವ ಅವಕಾಶವಿದೆ.

ADVERTISEMENT

ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗೆ ಈ ಲಿಂಕ್‌ಗೆ ಲಾಗ್‌ಇನ್‌ ಆಗಿ:https://bit.ly/tharleboxksfcforPV

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.