ADVERTISEMENT

ಬ್ರೇಕ್ ಅಪ್‌ಗಳ ಬಗ್ಗೆ ಪ್ರಶ್ನಿಸಿದವರಿಗೆ ಶ್ರುತಿ ಹಾಸನ್ ನೀಡಿದ ಉತ್ತರವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2021, 6:06 IST
Last Updated 31 ಡಿಸೆಂಬರ್ 2021, 6:06 IST
ನಟಿ ಶ್ರುತಿ ಹಾಸನ್‌
ನಟಿ ಶ್ರುತಿ ಹಾಸನ್‌    

ಬೆಂಗಳೂರು: ಬ್ರೇಕ್‌ ಅಪ್‌ಗಳ ಕುರಿತು ಪ್ರಶ್ನಿಸಿದ ವ್ಯಕ್ತಿಗೆ ನಟಿ ಶ್ರುತಿ ಹಾಸನ್‌ ಅವರು ಕುತೂಹಲಕರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ ‘ಆಸ್ಕ್‌ ಮಿ ಎನಿಥಿಂಗ್‌’ಕಾರ್ಯಕ್ರಮದಲ್ಲಿ ಶ್ರುತಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ‘ನಿಮ್ಮ ಜೀವನದಲ್ಲಿ ಎಷ್ಟು ಬ್ರೇಕ್‌ ಅಪ್‌ಗಳಾಗಿವೆ?‘ ಎಂದು ಕೇಳಿದ್ದಾರೆ.

ಅದಕ್ಕೆ ಉತ್ತರಿಸಿದ ಶ್ರುತಿ ಹಾಸನ್‌, ‘ನಿಮಗೆ ಎಷ್ಟು ಗರ್ಲ್‌ಫ್ರೆಂಡ್‌ಗಳಿದ್ದರು? ಯಾರೊಬ್ಬರೂ ಇರಲಿಲ್ಲ ಅಥವಾ ಹಾಫ್‌ ಗರ್ಲ್‌ಫ್ರೆಂಡ್‌ಇದ್ದಿರಬಹುದು ಎಂಬುದಾಗಿ ನಾನು ಊಹಿಸಿದ್ದೇನೆ’ಎಂದು ಕುಹಕವಾಡಿದ್ದಾರೆ.

ADVERTISEMENT

ಸದ್ಯ ಶ್ರುತಿ ಅವರು ಸಂತಾನು ಹಜಾರಿಕ ಜೊತೆ ಡೇಟಿಂಗ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.