ADVERTISEMENT

ನಟಿ ಶ್ರುತಿ ಹಾಸನ್‌ಗೆ ಕೋವಿಡ್ ಪಾಸಿಟಿವ್: ಆಸ್ಪತ್ರೆಗೆ ದಾಖಲು 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2022, 9:49 IST
Last Updated 27 ಫೆಬ್ರುವರಿ 2022, 9:49 IST
 ಶ್ರುತಿ ಹಾಸನ್
ಶ್ರುತಿ ಹಾಸನ್   

ಚೆನ್ನೈ: ಬಹುಭಾಷಾ ನಟಿ ಶ್ರುತಿ ಹಾಸನ್ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಹಂಚಿಕೊಂಡಿರುವ ಅವರು, ‘ಎಲ್ಲರಿಗೂ ನಮಸ್ಕಾರ. ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ಕೋವಿಡ್‌ ಪಾಸಿಟಿವ್​ ಆಗಿದೆ. ನಾನು ಗುಣಮುಖಳಾಗುತ್ತಿದ್ದೇನೆ.ಧನ್ಯವಾದಗಳು ಮತ್ತು ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​ಗೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಹಾರೈಸಿದ್ದಾರೆ.

ADVERTISEMENT

‘ಶ್ರುತಿ ಅವರೇ ಬೇಗ ಗುಣಮುಖರಾಗಿ ಹಿಂದಿರುಗಿ’ ಎಂದು ನಟ ಸಿದ್ದಾರ್ಥ್​ ಮಲ್ಹೋತ್ರಾ ಬರೆದುಕೊಂಡಿದ್ದಾರೆ.

‘ಬೇಗ ಗುಣಮುಖರಾಗಿ. ನಿಮಗೆನನ್ನ ಅಪ್ಪುಗೆ’ ಎಂದು ಗಾಯಕಿ ಸೋಫಿ ಚೌಧರಿ ಹೇಳಿದ್ದಾರೆ.

ಫೆ.18ರಂದು ಶ್ರುತಿ ನಟನೆಯ ‘ಬೆಸ್ಟ್​ಸೆಲ್ಲರ್​’ ವೆಬ್​ ಸರಣಿ ಅಮೆಜಾನ್​ ಪ್ರೈಮ್‌ನಲ್ಲಿಬಿಡುಗಡೆಯಾಗಿದೆ. ಪ್ರಭಾಸ್​ ನಟನೆಯ ಹಾಗೂ ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಸಿನಿಮಾದಲ್ಲಿ ಶ್ರುತಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.