ಸಿಕಂದರ್
ಬೆಂಗಳೂರು: ಎ.ಆರ್. ಮುರುಗದಾಸ್ ನಿರ್ದೇಶನದ ಹಾಗೂ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.
ಇದೇ ಮಾರ್ಚ್ 30ಕ್ಕೆ ಸಿಕಂದರ್ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ನಿನ್ನೆ ಮುಂಬೈನಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಅಲ್ಲಿದ್ದ ಕೆಲವರಿಂದ ಸಲ್ಮಾನ್ ಖಾನ್ ಅವರಿಗೆ ವಿಚಿತ್ರ ಪ್ರಶ್ನೆಯೊಂದು ಎದುರಾಯಿತು.
‘ನಿಮಗೂ ರಶ್ಮಿಕಾ ಮಂದಣ್ಣಗೂ ವಯಸ್ಸಿನ ಅಂತರ 31 ವರ್ಷ. ಅವರ ಜೊತೆ ರೊಮ್ಯಾನ್ಸ್ ನಟನೆ ಸರಿನಾ? ಎಂದು ಪ್ರಶ್ನೆ ಎದುರಾಯಿತು. ಇದಕ್ಕೆ ಕೋಪಗೊಳ್ಳದೇ ತಿರುಗೇಟು ನೀಡಿದ ಸಲ್ಮಾನ್, ‘ವಯಸ್ಸಿನ ಅಂತರದ ಬಗ್ಗೆ ಅವರು ಹೇಳುತ್ತಿದ್ದಾರೆ. ಹಿರೋಯಿನ್‌ಗೂ, ಅವರಪ್ಪನಿಗೂ ಏನೂ ಸಮಸ್ಯೆ ಇಲ್ಲ. ನಿಮಗೇನಾದರೂ ಸಮಸ್ಯೆನಾ? ಎಂದು ಮರು ಪ್ರಶ್ನೆ ಎಸೆದರು.
‘ರಶ್ಮಿಕಾ ಅವರಿಗೆ ಮದುವೆ ಆದ ಮೇಲೆ ಅವರಿಗೆ ಮಗಳು ಹುಟ್ಟಿದರೆ, ಅವರ ತಾಯಿ ಅನುಮತಿ ಪಡೆದು ಅವಳ ಜೊತೆಗೂ ನಟಿಸುವೇ’ ಎಂದು ಸಲ್ಮಾನ್ ಹೇಳಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ವಿಡಿಯೊ ಪೋಸ್ಟ್ ಹಂಚಿಕೊಂಡಿದೆ.
ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಜಯ್ ಎನ್ನುವ ಪಾತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ.
‘ಗಜಿನಿ‘, ‘ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ‘ ಖ್ಯಾತಿಯ ನಿರ್ದೇಶಕ ಎ.ಆರ್ ಮುರುಗದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರವು ಸಾಜಿದ್ ನಾದಿಯಾದ್‌ವಾಲಾ ನಿರ್ಮಾಣದಲ್ಲಿ ಮೂಡಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.