ಬಹುಕಾಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕ ದರ್ಶನ್ ರಾವಲ್
ಚಿತ್ರ ಕೃಪೆ: ಇನ್‌ಸ್ಟಾಗ್ರಂ
ಮುಂಬೈ: ಜನಪ್ರಿಯ ಗಾಯಕ ದರ್ಶನ್ ರಾವಲ್ ತಮ್ಮ ಬಹುಕಾಲದ ಗೆಳತಿ ಧರಲ್ ಸುರೇಲಿಯಾ ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಧರಲ್ ಅವರು ಕೆಂಪು ಬಣ್ಣದ ಸಾಂಪ್ರದಾಯಿಕ ಲೆಹಂಗಾ ಧರಿಸಿದ್ದು, ದರ್ಶನ್ ಅವರು ಶೆರ್ವಾನಿಯಲ್ಲಿ ಮಿಂಚಿದ್ದಾರೆ.
ಲವ್‌ಯಾತ್ರಿ ಚಿತ್ರದ ಚೋಗಡ ಮತ್ತು ಇಷ್ಕ್ ವಿಷ್ಕ್ ರೀಬೌಂಡ್ ಚಿತ್ರದ ಸೋನಿ ಸೋನಿ ಸೇರಿದಂತೆ ಹಲವು ಹಿಟ್ ಹಾಡುಗಳನ್ನು ದರ್ಶನ್ ಹಾಡಿದ್ದಾರೆ.
2015ರಲ್ಲಿ ಬಾಲಿವುಡ್ ಗಾಯಕನಾಗಿ ಪರಿಚಿತರಾದ ದರ್ಶನ್, ಬ್ರೇಕಪ್ ಹಾಡುಗಳಿಂದ ಹೆಚ್ಚು ಜನಪ್ರಿಯರಾಗಿದ್ದಾರೆ. ಹಿಂದಿ ಮಾತ್ರವಲ್ಲದೆ ಗುಜರಾತಿ ಮತ್ತು ತೆಲುಗು ಹಾಡುಗಳಿಗೂ ದರ್ಶನ್ ಧನಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.