ADVERTISEMENT

ಹೊಸ ಹೀರೊಗೆ ಸೋನಲ್‌ ಮೊಂತೆರೋ ಜೋಡಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2023, 0:45 IST
Last Updated 25 ಏಪ್ರಿಲ್ 2023, 0:45 IST
   

ಚಂದನವನದಲ್ಲಿ ನಟಿ ಸೋನಲ್‌ ಮೊಂತೆರೋ ಸಿನಿಮಾ ಬ್ಯಾಂಕ್‌ ಹಿಗ್ಗುತ್ತಲೇ ಇದೆ.

‘ಬನಾರಸ್‌’ ಮೂಲಕ ಪ್ಯಾನ್‌ ಇಂಡಿಯಾ ಲೋಕಕ್ಕೆ ಹೆಜ್ಜೆ ಇಟ್ಟಿರುವ ಸೋನಲ್‌ ಹೊಸ ಹೀರೊಗಳಿಗೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ‘ನಾಗರಹಾವು’ ಚಿತ್ರದ ಪಾತ್ರಗಳ ಹೆಸರನ್ನೇ ಇಟ್ಟುಕೊಂಡು ಸಿನಿಮಾವೊಂದು ಸೆಟ್ಟೇರಿದ್ದು, ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಎಂಬುದು ಚಿತ್ರದ ಶೀರ್ಷಿಕೆ. ‘ಲವ್‌ ಮಾಕ್ಟೇಲ್‌’, ‘ಬಡವ ರಾಸ್ಕಲ್‌’ ಹಾಗೂ ‘ಹೊಯ್ಸಳ’ ಸಿನಿಮಾದಲ್ಲಿ ಸಣ್ಣ ಪಾತ್ರಗಳಿಗೆ ಬಣ್ಣಹಚ್ಚಿದ್ದ ಅಭಿಲಾಷ್‌ ಇದೀಗ ಈ ಚಿತ್ರದ ಮುಖಾಂತರ ನಾಯಕ ನಟನಾಗಿದ್ದಾರೆ. ಇವರಿಗೆ ಸೋನಲ್‌ ಜೋಡಿಯಾಗಿದ್ದಾರೆ. ​ರಾಮಾಚಾರಿ ಅಲಿಯಾಸ್​ ರಾಮು ಎಂಬ ಪಾತ್ರದಲ್ಲಿ ಅಭಿಲಾಷ್‌ ನಟಿಸಲಿದ್ದು, ಸೋನಲ್​ ‘ಮೀರಾ ರಾಘವ್​ ರಾಮ್​ ಅಲಿಯಾಸ್​ ಮ್ಯಾಗಿ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್​ ಶೆಟ್ಟಿ ‘ಜಯಂತ್’ ಅಲಿಯಾಸ್​ ಜಲೀಲನಾಗಿ  ಕಾಣಿಸಿಕೊಳ್ಳಲಿದ್ದಾರೆ.

ನಟ ಧನಂಜಯ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿದ್ದಾರೆ. ‘ಒಬ್ಬ ಸಾಮಾನ್ಯ ಹುಡುಗನಿಗೆ ಶ್ರೀಮಂತ ಹುಡುಗಿ ಸಿಕ್ಕಿದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಕಥಾಹಂದರ. ಮೇ 15ರಂದು ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದರು ‌ನಿರ್ದೇಶಕ ಗಿರಿಧರ್ ಕುಂಬಾರ್. 

ADVERTISEMENT
ಹೊಸ ಹೀರೊ ಅಭಿಲಾಷ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.