ADVERTISEMENT

ನಾಲ್ಕೈದು ಯುವಕರಿಂದ ಕನ್ನಡದಲ್ಲೇ ಹಾಡುವಂತೆ ಬೆದರಿಕೆ: ಸೋನು ನಿಗಮ್

ಪಿಟಿಐ
Published 4 ಮೇ 2025, 11:39 IST
Last Updated 4 ಮೇ 2025, 11:39 IST
<div class="paragraphs"><p>ಸೋನು ನಿಗಮ್</p></div>

ಸೋನು ನಿಗಮ್

   

ನವದೆಹಲಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಾಭಿಮಾನಕ್ಕೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿರುವ ಬಾಲಿವುಡ್ ಗಾಯಕ ಸೋನು ನಿಗಮ್, ಕಾರ್ಯಕ್ರಮದ ವೇಳೆ ನಾಲ್ಕೈದು ಯುವಕರು ಕನ್ನಡ ಹಾಡು ಹಾಡುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಕನ್ನಡಾಭಿಮಾನವನ್ನು ಪಹಲ್ಗಾಮ್‌ ಘಟನೆಗೆ ಹೋಲಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸೋನು ನಿಗಮ್‌ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

ಕೆಲವರು ಮಾಡಿದ ತಪ್ಪಿಗಾಗಿ ಇಡೀ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಬೇಡಿ ಎಂದು ಅವರು ಹೇಳಿದ್ದಾರೆ.

'ಗೂಂಡಾ ತರಹನೇ ವರ್ತಿಸುತ್ತಿದ್ದ ನಾಲ್ಕೈದು ಮಂದಿ 'ಕನ್ನಡ-ಕನ್ನಡ' ಎಂದು ಆಕ್ರೋಶಭರಿತರಾಗಿ ಕೂಗುತ್ತಿದ್ದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಡಿ ಎಂದು ಅಲ್ಲಿದ್ದ ಯುವತಿಯರು ಹೇಳುತ್ತಿದ್ದರು. ಪ್ರೇಕ್ಷಕರಾಗಿ ಬೆದರಿಕೆ ಹಾಕಲು ಅವಕಾಶ ನೀಡಬಾರದು. ಕೆರಳಿಸುವವವನ್ನು ತಕ್ಷಣವೇ ತಡೆಯುವುದು ಮುಖ್ಯವಾಗಿತ್ತು' ಎಂದು ಹೇಳಿದ್ದಾರೆ.

'ಪ್ರೀತಿಯ ಜಗತ್ತಿನಲ್ಲಿ ಯಾರಾದರೂ ದ್ವೇಷದ ಬೀಜಗಳನ್ನು ಬಿತ್ತುವುದಾದರೆ ಅದನ್ನು ತಕ್ಷಣವೇ ತಡೆಗಟ್ಟಬೇಕು. ಕನ್ನಡಿಗರು ಒಳ್ಳೆಯ ಜನರು. ಹಾಗಾಗಿ ಈ ವಿಷಯವನ್ನು ದಯವಿಟ್ಟು ಸಾಮಾನ್ಯೀಕರಿಸಬೇಡಿ. ಮೊದಲ ಹಾಡನ್ನು ಮುಗಿಸಿದ ಕೂಡಲೇ ನಾಲ್ಕೈದು ಮಂದಿ ಕೋಪದಿಂದಲೇ ನೋಡುತ್ತಿದ್ದರು. ಅವರು ಬೇಡಿಕೆ ಇಡುತ್ತಿರಲಿಲ್ಲ. ಬದಲಾಗಿ ಬೆದರಿಕೆ ಹಾಕುತ್ತಿದ್ದರು. ನೀವು ಬೇಕಿದ್ದರೆ ಅಲ್ಲಿದ್ದ ಜನರನ್ನು ಕೇಳಬಹುದು' ಎಂದು ಹೇಳಿದ್ದಾರೆ.

ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡ ಕುರಿತು ಆಡಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯುವಕನೊಬ್ಬ ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದಾಗ ಅದನ್ನು ಪಹಲ್ಗಾಮ್ ದಾಳಿಗೆ ತಳಕು ಹಾಕಿ ಗಾಯಕ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.