ADVERTISEMENT

ಸೋನು ಸೂದ್ ಹೆಸರಿನಲ್ಲಿ ನಕಲಿ ಕೋವಿಡ್ ದೇಣಿಗೆ ಅಭಿಯಾನ: ಎಚ್ಚರಿಸಿದ ನಟ

ಪಿಟಿಐ
Published 17 ಮೇ 2021, 19:06 IST
Last Updated 17 ಮೇ 2021, 19:06 IST
ಸೋನು ಸೂದ್
ಸೋನು ಸೂದ್   

ಮುಂಬೈ: ಕೋವಿಡ್‌–19 ಬಿಕ್ಕಟ್ಟಿನ ಮಧ್ಯೆ ಜನರಿಗೆ ನಿರಂತರವಾಗಿ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್, ಸಹಾಯ ಮಾಡುವ ನೆಪದಲ್ಲಿ ತಮ್ಮ ಹೆಸರನ್ನು ಬಳಸಿಕೊಂಡು ನಕಲಿ ಫೌಂಡೇಷನ್ ಮೂಲಕ ದೇಣಿಗೆ ಪಡೆಯುತ್ತಿರುವ ಬಗ್ಗೆ ಸೋಮವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

‘ಸೋನು ಸೂದ್ ಫೌಂಡೇಷನ್’ ಎನ್ನುವ ಹೆಸರಿನಲ್ಲಿ ಕೆಲವರು ದೇಣಿಗೆ ಪಡೆಯುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ’ ಎಂದು ತಮ್ಮ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಸೋನು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಿದ್ದಾರೆ.

‘ಈ ಬಗ್ಗೆ ಎಚ್ಚರಿಕೆಯಿಂದಿರಿ ಮತ್ತು ನಿಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ’ ಎಂದಿರುವ ಅವರು ತಮ್ಮ ಹೆಸರಿನ ಫೌಂಡೇಷನ್‌ನ ಪೋಸ್ಟರ್‌ ಅನ್ನು ಟ್ಯಾಗ್ ಮಾಡಿ ಇದು ನಕಲಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.