ADVERTISEMENT

‘ಸ್ಪೂಕಿ ಕಾಲೇಜ್’ ದೆವ್ವದ ಕಥೆಯೇ?

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 10:29 IST
Last Updated 19 ಜೂನ್ 2022, 10:29 IST
‘ಸ್ಪೂಕಿ ಕಾಲೇಜ್‌’ ವಿವೇಕ್‌ ಸಿಂಹ, ಖುಷಿ ರವಿ
‘ಸ್ಪೂಕಿ ಕಾಲೇಜ್‌’ ವಿವೇಕ್‌ ಸಿಂಹ, ಖುಷಿ ರವಿ   

ಟೀಸರ್‌ನಲ್ಲೇ ಸಿನಿಮಾ ತೋರಿಸಿದ್ದಾರೋ ಅಥವಾ ಸಿನಿಮಾದಲ್ಲೇನಿದೆಯೋ... ಕುತೂಹಲವಂತೂ ಉಳಿದಿದೆ. ಇದು ‘ಸ್ಪೂಕಿ ಕಾಲೇಜ್‌’ ಚಿತ್ರದ ಟೀಸರ್‌ ನೋಡಿದ ಬಳಿಕದ ಅನುಭವ.

ದೆವ್ವದ ಪಾತ್ರ ನೆನಪಿಸುವ ದೃಶ್ಯಗಳು, ಕೊಲೆ, ಆತ್ಮಹತ್ಯೆಯ ಹಿನ್ನೆಲೆ, ಅಪರಾಧದ ಸುತ್ತ ನಡೆಯುವ ಕಥೆಯಂತೆ ‘ಸ್ಪೂಕಿ’ ಟೀಸರ್‌ ಭಾಸವಾಗುತ್ತದೆ. ನಾಯಕಿಯ ಮೂಲಕವೇ ‘ಸ್ಪೂಕಿ’ಯ ಭಯ ತೆರೆದುಕೊಳ್ಳುತ್ತದೆ.

‘ನಾ ನಿನ್ನ ಬಿಡಲಾರೆ’, ‘ಆಪ್ತಮಿತ್ರ’ ಸಿನಿಮಾಗಳ ರೀತಿಯೇ ಈ ಚಿತ್ರವೂ ಪ್ರೇಕ್ಷಕರ ಮನಗೆಲ್ಲಲಿದೆ ಎಂಬ ನಿರೀಕ್ಷೆ ಚಿತ್ರ ತಂಡದ್ದು. ಕಾಲೇಜ್‌ನಲ್ಲಿ ದೆವ್ವ ಇದೆ ಎನ್ನುವುದು ಈ ಚಿತ್ರದ ಹೈಲೈಟ್. ಟೀಸರ್ ಶ್ರೀದೇವಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

ADVERTISEMENT

ನಟ ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಟೀಸರ್ ಬಗ್ಗೆ ಟ್ವಿಟ್ ಮಾಡಿ ಶುಭ ಕೋರಿದ್ದಾರೆ. ‘ಸ್ಪೂಕಿ’ ಎಂದರೆ ಭಯ. ಟೀಸರ್ ನೋಡಿದವರಿಗೆ ‘ಸ್ಪೂಕಿ’ ಪದದ ವಿಶ್ಲೇಷಣೆಯನ್ನು ನಿರ್ದೇಶಕರು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಧಾರಾವಾಡದ ನೂರಕ್ಕೂ ಹೆಚ್ಚಿನ ವರ್ಷ ಹಳೆಯದಾದ
ಕಾಲೇಜು ಹಾಗೂ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ‌ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ನಿಮ್ಮ ಮುಂದೆ ‘ಸ್ಪೂಕಿ ಕಾಲೇಜ್’ ಬರಲಿದೆ ಎಂದಿದೆ ಚಿತ್ರತಂಡ.

‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ನಿರ್ಮಾಪಕ ಎಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ಭರತ್ ಅವರೇ ಬರೆದಿದ್ದಾರೆ.

ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ (ಕೆ.ಜಿ.ಎಫ್) ಅವರ ಸಂಕಲನ ಈ ಚಿತ್ರಕ್ಕಿದೆ.

‘ಪ್ರೀಮಿಯರ್ ಪದ್ಮಿನಿ’ಖ್ಯಾತಿಯ ವಿವೇಕ್ ಸಿಂಹ ‘ಸ್ಪೂಕಿ ಕಾಲೇಜ್’ನ ನಾಯಕ. ‘ದಿಯಾ’ ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.